Home » Tulu movie: ತುಳುನಾಡು ಸಿನಿಮಾ ಪಿದಾಯಿ ಮೇ 9ಕ್ಕೆ ಬೆಳ್ಳಿತೆರೆಗೆ!

Tulu movie: ತುಳುನಾಡು ಸಿನಿಮಾ ಪಿದಾಯಿ ಮೇ 9ಕ್ಕೆ ಬೆಳ್ಳಿತೆರೆಗೆ!

0 comments

Tulu movie: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರಾದ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ ತುಳು ಸಿನಿಮಾ ಪಿದಾಯಿ ಮೇ 9ನೇ ತಾರೀಕಿನಂದು ಕರಾವಳಿಯಾದ್ಯಂತ ಬಿಡುಗಡೆಯಾಗಲಿದೆ.

ಪಿದಾಯಿ ಚಿತ್ರವು ಕೊಲ್ಕತ್ತ, ಸಿಮ್ಲಾ, ಜಾರ್ಖಂಡ್‌ ಹಾಗೂ ಕ್ಯಾಲಿಫೋರ್ನಿಯಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಧಿಕೃತವಾಗಿ ಆಯ್ಕೆಯಾಗುವುದರ ಜೊತೆಗೆ, 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮಬಾರಿಗೆ ತುಳು ಚಿತ್ರವೊಂದು (tulu movie ) ಭಾರತೀಯ ಚಲನಚಿತ್ರ ಹಾಗೂ ಕನ್ನಡ ಚಲನಚಿತ್ರ ಹೀಗೆ ಎರಡೂ ವಿಭಾಗಗಳ‌ಲ್ಲಿ ಸ್ಪರ್ಧೆಯಲ್ಲಿದ್ದು ಅಂತಿಮವಾಗಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

You may also like