Home » RCB-Virat Kohli: ‘RCB’ ಅಭಿಮಾನಿಗಳಿಗೆ ಸಿಹಿಸುದ್ದಿ ; ತಂಡದ ನಾಯಕತ್ವಕ್ಕೆ ಮತ್ತೆ ಮರಳಿದ ವಿರಾಟ್ ಕೊಹ್ಲಿ!!

RCB-Virat Kohli: ‘RCB’ ಅಭಿಮಾನಿಗಳಿಗೆ ಸಿಹಿಸುದ್ದಿ ; ತಂಡದ ನಾಯಕತ್ವಕ್ಕೆ ಮತ್ತೆ ಮರಳಿದ ವಿರಾಟ್ ಕೊಹ್ಲಿ!!

0 comments
RCB-Virat Kohli

RCB-Virat Kohli: ‘RCB’ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಹೌದು, ವಿರಾಟ್ ಕೊಹ್ಲಿ (Virat Kohli) ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ಕಳೆದ ಚೆನ್ನೈ ಪಂದ್ಯದ ವೇಳೆ ಆರ್​ಸಿಬಿ ತಂಡದ ನಾಯಕ ಸ್ಟಾರ್​ ಬ್ಯಾಟ್ಸ್​ಮನ್​ ಫಾಫ್​ ಡು ಪ್ಲೇಸಿಸ್​ (Faf du Plessis) ಗಾಯಗೊಂಡಿದ್ದಾರೆ. ಹಾಗಾಗಿ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ , ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿತ್ತು. ಆದರೆ, ಫಾಫ್ ಇಂದಿನ ಪಂದ್ಯದಲ್ಲಿ ಫೀಲ್ಡಿಂಗ್ ನಡೆಸದೆ ಬ್ಯಾಟಿಂಗ್ ಮಾತ್ರ ಮಾಡಲಿದ್ದಾರೆ. ಹಾಗಾಗಿ ನಾಯಕತ್ವದ ಸ್ಥಾನ ವಿರಾಟ್ (RCB-Virat Kohli) ಪಾಲಾಗಿದೆ.

ತಮ್ಮ ಗಾಯದ ಬಗ್ಗೆ ಡುಪ್ಲೆಸಿಸ್ ಮಾತನಾಡಿದ್ದು, “ ಫೀಲ್ಡಿಂಗ್ ಸಮಯದಲ್ಲಿ ನನ್ನ ಪಕ್ಕೆಲುಬುಗಳಿಗೆ ಗಾಯವಾಗಿದೆ. ಇದು ಇನ್ನಿಂಗ್ಸ್ ಮುಂದುವರೆದಂತೆ ನೋವು ತೀವ್ರಗೊಳ್ಳಲು ಪ್ರಾರಂಭಿಸಿತು ”ಎಂದಿದ್ದಾರೆ.

ಸದ್ಯ ವಿರಾಟ್ ಕೊಹ್ಲಿ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ಪಡೆದಿರುವುದು RCB’ ಅಭಿಮಾನಿಗಳಿಗೆ ಭರ್ಜರಿ ಖುಷಿಯ ಸುದ್ದಿಯೇ ಸರಿ. ಎಲ್ಲರೂ ತಮ್ಮ ನೆಚ್ಚಿನ ಸ್ಟಾರ್ ಆಟಗಾರನನ್ನು ಮತ್ತೆ ತಂಡದಲ್ಲಿ ನೋಡಲು ಉತ್ಸುಕರಾಗಿದ್ದಾರೆ.

 

ಇದನ್ನು ಓದಿ: Southern Railway Recruitment 2023: PUC ಆದವರಿಗೆ ರೈಲ್ವೇ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ! 

You may also like

Leave a Comment