Home » Abhishek Ambareesh Marriage Date : ಅಭಿಷೇಕ್ ಅಂಬರೀಶ್ -ಅವಿವಾ ಬಿದ್ದಪ್ಪ ಮದುವೆ ದಿನಾಂಕ ಫಿಕ್ಸ್! ಪ್ರಧಾನಿಯನ್ನು ಆಹ್ವಾನಿಸಿದ ಅಭಿಷೇಕ್ ಕುಟುಂಬ!

Abhishek Ambareesh Marriage Date : ಅಭಿಷೇಕ್ ಅಂಬರೀಶ್ -ಅವಿವಾ ಬಿದ್ದಪ್ಪ ಮದುವೆ ದಿನಾಂಕ ಫಿಕ್ಸ್! ಪ್ರಧಾನಿಯನ್ನು ಆಹ್ವಾನಿಸಿದ ಅಭಿಷೇಕ್ ಕುಟುಂಬ!

3 comments
Wedding Invitation

Wedding Invitation :ಮಂಡ್ಯದ ಗಂಡು ಎಂದು ಹೇಳಿದಾಗ ಸಾಮಾನ್ಯವಾಗಿ ಎಲ್ಲರಿಗೂ ರೆಬಲ್ ಸ್ಟಾರ್ ಅಂಬರೀಶ್(Rebel Star Ambarish) ನೆನಪಾಗುತ್ತಾರೆ.ಎಲ್ಲರನ್ನೂ ತನ್ನವರೆಂದು ಪ್ರೀತಿ ಮಾಡೋ ವಿಷಯದಲ್ಲಿ ರೆಬಲ್ ಮಾಸ್, (Wedding Invitation)ಹಾಗೆಯೇ ಟೊಂಟ್ (taunt) ಹೊಡೆಯೋದ್ರಲ್ಲಿ ರೆಬಲ್ ಕ್ಲಾಸ್.

ಅದೇ ರೀತಿ ತನ್ನ ತಂದೆಯ ಹಾದಿಯಲ್ಲಿ ನಡೆದುಕೊಂಡು ಬಂದಂತಹ ಮಗ ಅಭಿಷೇಕ್ ಅಂಬರೀಶ್(Abhishek Ambarish) ಕೂಡ ಸಿನಿ ಪರದೆಯ ಮೇಲೆ ಪಾದಾರ್ಪಣೆ ಮಾಡಿದರು. 2019 ರಲ್ಲಿ ಬಂದ ‘ಅಮರ್’ ಚಲನಚಿತ್ರದ(Amar film) ಮೂಲಕ ಅಭಿಷೇಕ್ ಅಂಬರೀಶ್ ಸಿನಿ ತೆರೆಯಲ್ಲಿ ತಮ್ಮ ಚೊಚ್ಚಲ ಪ್ರವೇಶವನ್ನು ಮಾಡಿದರು. ನಟನೆಯಲ್ಲಿ ಅಭಿಮಾನಿಗಳಿಂದ ಹೆಚ್ಚಿನ ಸಂಭಾವನೆ ಪಡೆದ ಅಭಿಷೇಕ್ ಅಂಬರೀಶ್ ಇದೀಗ ತನ್ನ ನಿಜ ಜೀವನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಪುತ್ರ ಅಭಿಷೇಕ್ ಅಂಬರೀಶ್ (Abhishek Ambareesh) ಅವರ ಮದುವೆ ಇದೀಗ ಡೇಟ್ ಫಿಕ್ಸ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನ ಅಭಿಷೇಕ್ ಮತ್ತು ತಾಯಿ ಸುಮಲತಾ(sumalatha) ಭೇಟಿಯಾಗಿ ಮದುವೆ (Wedding) ಆಹ್ವಾನ (Invitation) ಪತ್ರಿಕೆ ನೀಡಿ ಮದುವೆಗೆ ಬಂದು ವಧು ವರರನ್ನು ಆಶೀರ್ವದಿಸಬೇಕೆಂದು ಪ್ರೀತಿಯಿಂದ ಆಹ್ವಾನ ಪತ್ರಿಕೆಯನ್ನು ನೀಡಿದ್ದಾರೆ. ಹಾಗೆಯೇ ಕೆಲ ಸಮಯದ ವರೆಗೆ ಪ್ರಧಾನಮಂತ್ರಿ ಜೊತೆಗೆ ಸಂತಸದ ಸಮಯವನ್ನು ಕಳೆದಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದೀಗ ಅಭಿಷೇಕ್ ಅಂಬರೀಶ್ ತಮ್ಮ ಅಭಿಮಾನಿಗಳಿಗೆ(fans) ತನ್ನ ಮದುವೆಯ ವಿಷಯದಲ್ಲಿ ಈ ಮೂಲಕ ಗುಡ್ ನ್ಯೂಸ್ ನೀಡಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಮನೆಯವರ ಒಪ್ಪಿಗೆಯ ಮೇರೆಗೆ ಅಗ್ನಿಸಾಕ್ಷಿಯಾಗಿ ಕೈಹಿಡಿದು ಮದುವೆಗೆ(marriage) ಮುದ್ರೆ ಒತ್ತಲು ಅಭಿಷೇಕ್ ಜೋಡಿ ಇದೀಗ ರೆಡಿಯಾಗಿದ್ದಾರೆ. ಅವಿವಾ ಮತ್ತು ಅಭಿಷೇಕ್ ಮದುವೆಗೆ ಜೂನ್ 5 ರಂದು ಈಗಾಗಲೇ ದಿನ ನಿಶ್ಚಯವಾಗಿದೆ. ಈಗಾಗಲೇ ಮದುವೆಯ ದಿನಗಣನೆ ಶುರುವಾಗಿದೆ. ಈ ಜೋಡಿಗಳ ಮದುವೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇತ್ತೀಚಿಗಷ್ಟೇ ಅಭಿಷೇಕ್- ಅವಿವಾ ನಿಶ್ಚಿತಾರ್ಥ(engagement) ಎಲ್ಲರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಈಗ ಜೂನ್ 5ಕ್ಕೆ ಈ ಅಪರೂಪದ ಜೋಡಿಗಳ ಬೆಂಗಳೂರಿನ ಪ್ಯಾಲೆಸ್ (Bangalore palace) ಗ್ರೌಂಡ್‌ನಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಸಿನಿಮಾ ರಂಗ ಹಾಗೂ ರಾಜಕೀಯ ರಂಗದ ಗಣ್ಯಾತಿ ಗಣ್ಯರು ಮದುವೆಗೆ ಭಾಗಿಯಾಗಲಿದ್ದಾರೆ. ಈ ಶುಭ ಸುದ್ದಿಯನ್ನು ಕೇಳಿದ ಅಭಿಮಾನಿಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ( social media) ಅಭಿಷೇಕ್ ಅಂಬರೀಶ್ ಗೆ ಮದುವೆಯ ವಿಚಾರವಾಗಿ ಶುಭ ಕೋರುತ್ತಿದ್ದಾರೆ.ಹಾಗೆಯೇ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

You may also like

Leave a Comment