Vinod Prabhakar: ಬೆಂಗಳೂರು: ನಟ ವಿನೋದ್ ಪ್ರಭಾಕರ್ ಹಾಗೂ ನಟಿ ಸೌಂದರ್ಯ ಜಯಮಾಲಾ ಸಹೋದರ ಸಹೋದರಿಯರು. ಇಬ್ಬರಿಗೂ ಅಪ್ಪ ಟೈಗರ್ ಪ್ರಭಾಕರ್. ಆದರೆ ಇಬ್ಬರ ಅಮ್ಮ ಬೇರೆ ಬೇರೆ. ಅತ್ತ ಟೈಗರ್ ಪ್ರಭಾಕರ್ ಮತ್ತು ಜಾಯಮಾನ ಬೇರೆ ಬೇರೆಯಾದ ನಂತರ ವಿನೋದ್ ಪ್ರಭಾಕರ್ ಅಪ್ಪನ ಜೊತೆ ಬದುಕುತ್ತಿದ್ದರು. ಜಯಮಾಲಾ ತಮ್ಮ. ಮಗಳು ಸೌಂದರ್ಯ ಜತೆಗೆ ಬೇರೆ ಆಗಿದ್ದರು. ವಿನೋದ್ ಪ್ರಭಾಕರ್ ನ ತಾಯಿ ಮೇರಿ ಅಲ್ಫಾಂಸಾ.
ಒಟ್ಟಾರೆ ವಿನೋದ್ ಪ್ರಭಾಕರ್ (Vinod Prabhakar) ಮತ್ತು ಸೌಂದರ್ಯ ಜಾಯಮಾನ ಇಬ್ಬರು ಅಪ್ಪನ ಕಡೆಯಿಂದ ಸಹೋದರ ಸಹೋದರಿಯರು. ಈ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳದೆ ಕಾರಣಾಂತರಗಳಿಂದ ದೂರವಿದ್ದರು. ಅದರ ಬಗ್ಗೆ ವಿನಾಕಾರಣ ಅಂತೆ-ಕಂತೆಗಳು ಹಬ್ಬಿದ್ದವು. ಆದರೆ ಈಗ ಅವೆಲ್ಲಕ್ಕೂ ಉತ್ತರ ಎಂಬಂತೆ ಇಬ್ಬರೂ ಜೊತೆಗೇ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಅಭಿಷೇಕ್ ಅಂಬರೀಶ್ ಮದುವೆ ಕಾರಣವಾಗಿದೆ.
ಒಟ್ಟಿಗೆ ಆಡುತ್ತ ಬೆಳೆದ ಈ ಅಣ್ಣ ತಂಗಿ ಬದಲಾದ ಕೌಟುಂಬಿಕ ಕಲಹದ ಕಾರಣ ದೂರ ಉಳಿದಿದ್ದರೂ ಇದೀಗ ಕಾಲವೇ ಅವರನ್ನು ಮತ್ತೆ ಜೊತೆಗೂಡಿಸಿದೆ ಎನ್ನಬಹುದು. ಮೊನ್ನೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ಅದ್ಧೂರಿಯಾಗಿ ನಡೆದ ನಟ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದ್ದಪ್ಪರ ಆರತಕ್ಷತೆಯಲ್ಲಿ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ಸೋದರ ಸೋದರಿಯರು ಮುಖಾಮುಖಿಯಾಗಿದ್ದಾರೆ. ಇಬ್ಬರೂ ಒಳ್ಳೆಯ ಕ್ಷಣಗಳನ್ನು ಕಳೆದಿದ್ದಾರೆ.
ಅವರಿಬ್ಬರೂ ಭೇಟಿಯಾಗದೆ ಬಹಳ ವರ್ಷಗಳಾಗಿತ್ತು. ಹಲವು ವರ್ಷಗಳ ಬಳಿಕ ಪರಸ್ಪರ ನೋಡಿ ಇಬ್ಬರೂ ಖುಷಿಯಾಗಿದ್ದು, ಮೊನ್ನೆ ಸಿಕ್ಕಾಗ ಸಾಕಷ್ಟು ಸಮಯ ಮಾತುಕತೆ ನಡೆಸಿದ್ದಾರೆ. ಅಣ್ಣನ ಪತ್ನಿ ನಿಶಾ ವಿನೋದ್ ಪ್ರಭಾಕರ್ ಜೊತೆಯಲ್ಲಿಯೂ ಸೌಂದರ್ಯ ಖುಷಿ ಖುಷಿಯಿಂದ ಕಾಲ ಕಳೆದಿದ್ದಾರೆ. ಆಮೇಲೆ ಮೂವರೂ ಜತೆಗೇ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಇಬ್ಬರೂ ದೂರವಾಗಿದ್ದಾರೆ, ಅವರ ಮಧ್ಯೆ.ಮಾತುಕತೆ ಇಲ್ಲ, ಏನೂ ಎಲ್ಲವೂ ಸರಿ ಇಲ್ಲ ಎಂಬಂಥ ಗಾಂಧಿನಗರದ ಗಾಸಿಪ್ಗಳಿಗೆ ಇವರು ಜೊತೆಯಾಗಿ ಕಾಣಿಸಿಕೊಂಡು ಅವೆಲ್ಲ ಸತ್ಯವಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಮರಿ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ನಡುವೆ ಅಣ್ಣ-ತಂಗಿಯ ಬಾಂಧವ್ಯ ಚೆನ್ನಾಗಿದೆ. ಮುಂದೆ ಅವರಿಬ್ಬರೂ ಇನ್ನಷ್ಟು ಹತ್ತಿರವಾಗಲಿ ಅನ್ನೋದು ಎಲ್ಲರ ಹಾರೈಕೆ.
