Elon Musk-Anushka Shetty :ದಕ್ಷಿಣದ ಖ್ಯಾತ ತಾರೆ, ಕರಾವಳಿ ಬೆಡಗಿ, ಮಾಹಿಷ್ಮತಿ ಸಾಮ್ರಾಜ್ಯದ ಉತ್ತರಾಧಿಕಾರಿ ಅನುಷ್ಕಾ ಶೆಟ್ಟಿ (Anushka Shetty) ನಿಜವಾಗಲೂ ಅದೃಷ್ಟವಂತೆ. ಕೇವಲ ಆಕೆ ಸಾಲು ಸಾಲು ಗೆದ್ದಿರುವ ಕಾರಣಕ್ಕಾಗಿ ಅಲ್ಲ, ಬದಲಿಗೆ ಆಕೆಯ ಮೋಡಿಗೆ ಎಲಾನ್ ಮಸ್ಕ್ ಕೂಡಾ ಮನಸೋತಿದ್ದು ಇದೀಗ ಟ್ವಿಟರ್ (Twitter) ಸಂಸ್ಥೆಯ ಮಾಲೀಕ ಮಸ್ಕ್ ಮನದಲ್ಲಿ ಪ್ರೀತಿ ಮತ್ತೊಮ್ಮೆ ಮೂಡಿದೆ. ಅದರ ಕುರುಹಾಗಿ ಆತ ಅನುಷ್ಕಾ ಶೆಟ್ಟಿಗೆ (Elon Musk-Anushka Shetty) ಒಂದು ಗಿಫ್ಟ್ ಕಳುಹಿಸಿ ಕೊಟ್ಟಿದ್ದಾರೆ.
ಸ್ಪೇಸ್ X ದೊರೆ ಎಲೋನ್ ಮಸ್ಕ್ ಗೂ ಅನುಷ್ಕಾಗೆ ಹೇಗೆ ಪರಿಚಯ ಅಂತ ನೀವು ಕೇಳಲೇಬೇಡಿ ಕೇಳಿದರೂ ಅದಕ್ಕೆ ನಮ್ಮಲ್ಲಿ ಉತ್ತರವಿಲ್ಲ. ಅನುಷ್ಕಾ ಯಾರು ಎನ್ನುವುದು ಎಲೋನ್ ಮಸ್ಕ್ ಗೆ ಗೊತ್ತಿರುವ ಸಾಧ್ಯತೆಗಳೇ ಕಮ್ಮಿ. ಆದರೆ ಖಚಿತವಾಗಿ ಅನುಷ್ಕಾ ಶೆಟ್ಟಿಗೆ ಯಾರು, ಆತನ ಸಾಧನೆ ಏನು ಎನ್ನುವುದು ಆಕೆಗೆ ಗೊತ್ತು. ಹಾಗಿರುವಾಗ ತನಗೆ ಗೊತ್ತೇ ಇಲ್ಲದ ಈ ಜಗತ್ತು ಸುಂದರಿಗೆ ನೀಡಿದ್ದಾರೆ ಎಲೋನ್ ಮಸ್ಕ್ ಮಸ್ತ್ ಮಸ್ತ್ ಗಿಫ್ಟ್ ನೀಡಿದ್ದಾರೆ. ಅಂದ್ರೆ, ಮಸ್ಕ್ ತೆಗೆದುಕೊಂಡ ಒಂದು ನಿರ್ಧಾರ ಅನುಷ್ಕಾಗೆ ವರವಾಗಿದೆ. ಹಾಗಾಗಿ ಅದನ್ನು ಗಿಫ್ಟ್ ಎಂದೇ ಅಭಿಮಾನಿಗಳು ಭಾವಿಸಿದ್ದಾರೆ. ಸಣ್ಣದಾಗಿ ಸೋಶಿಯಲ್ ಮೀಡಿಯಾದಲ್ಲಿ ಅನುಷ್ಕಾಗೆ ರೇಗಿಸಲಾಗುತ್ತಿದೆ. ಇನ್ನೂ ಸರಿಯಾದ ಹುಡುಗ ಸಿಕ್ಕದೆ, ಬಾಹುಬಲಿಯ ಸಾಧನೆಯ ವರನ ನಿರೀಕ್ಷೆಯಲ್ಲಿರುವ ಅನುಕ್ಷಾ ಶೆಟ್ಟಿ ಕೆನ್ನೆ ಕೆಂಪಾಗಿಸಿಕೊಂಡು ನಾಚಿಕೊಂಡಿದ್ದಾಳೆ.
ಹಣ ಕೊಟ್ಟು ಚಂದಾದಾರರಾದ ವ್ಯಕ್ತಿಗಳಿಗೆ ಮಾತ್ರ ಟ್ವಿಟರ್ ನಲ್ಲಿ ಬ್ಲೂಟಿಕ್ (BlueTick) ಸಿಗಲಿದೆ ಎಂದು ಮಸ್ಕ್ ಈ ಹಿಂದೆ ಪ್ರಕಟಿಸಿದ್ದರು. ಅದರಂತೆ, ಇಲ್ಲಿಯ ತನಕ ಹಣ ಪಾವತಿಸದ ಪ್ರತಿಯೊಬ್ಬರ ಖಾತೆಯಿಂದಲೂ ಬ್ಲೂಟಿಕ್ ಕಳಚಿ ಕೊಂಡಿತ್ತು. Twitter ನ ಈ ನಡೆಯನ್ನು ಸೆಲೆಬ್ರಿಟಿಗಳು ಸ್ವಾಗತಿಸಿದ್ದರು, ಮತ್ತೆ ಕೆಲವರು ತಟಸ್ಥರಾಗಿ ಉಳಿದಿದ್ದರು. ಅಮಿತಾಬ್ ಬಚ್ಚನ್ ಅಂತಹ ಕೆಲ ಗಣ್ಯರು ತರಾತುರಿಯಲ್ಲಿ ಹಣ ಪಾವತಿಸಿ ನೀಲಿ ಕಡ್ಡಿಯನ್ನು ವಾಪಸ್ ಪಡೆದಿದ್ದರು. ಗಣ್ಯರಷ್ಟೇ ಹಣ ಪಾವತಿಸಿದ್ದರಿಂದ, ಟ್ವಿಟರ್ ಗೆ ಬೇರೆ ರೀತಿಯಲ್ಲಿ ಪರಿಣಾಮ ಬೀರಬಹುದು ಎಂದು ಎಲೋನ್ ಮತ್ತೊಂದು ಪ್ಲ್ಯಾನ್ ಮಾಡಿದ್ದರು. ಅದು ಈಗ ಅನುಷ್ಕಾಗೆ ವರವಾಗಿದೆ.
ನಿನ್ನೆ ಅನುಷ್ಕಾ ಶೆಟ್ಟಿಯ ಟ್ವಿಟರ್ ಖಾತೆ ಒಂದು ಮಿಲಿಯನ್ ಹಿಂಬಾಲಕರನ್ನು ಪಡೆದಿದೆ. ಈ ಖುಷಿಯನ್ನು ಅವರು ಹಂಚಿಕೊಂಡಿದ್ದರು. ಈ ಸಮಯದಲ್ಲಿಯೇ ‘ ಹತ್ತು ಲಕ್ಷ ಹಿಂಬಾಲಕರನ್ನು ಹೊಂದಿದ ಟ್ವಿಟರ್ ಖಾತೆಗೆ ಉಚಿತವಾಗಿ ಬ್ಲೂಟಿಕ್ ‘ ನೀಡುವುದಾಗಿ ಎಲೋನ್ ಮಸ್ಕ್ ಘೋಷಿಸಿದ್ದಾರೆ. ಹೀಗಾಗಿ ಅನುಷ್ಕಾ ಉಚಿತವಾಗಿ ಬ್ಲೂಟಿಕ್ ಪಡೆದಿದ್ದಾರೆ. ಅನುಷ್ಕಾ ಶೆಟ್ಟಿಯ ಮೇಲಿನ ಮಸ್ಕ್ ಈ ಪ್ರೀತಿ ಕೇವಲ ಸಾಂದರ್ಭಿಕ ಅಷ್ಟೇ. ಪ್ರೀತಿ-ಗೀತಿ ಮಾಡ್ಕೊಂಡು ಮೆಸೇಜ್ ಟೆಸ್ಟಿಂಗ್ ಹೊಡ್ಕೊಂಡು ಇದ್ರೆ ಸ್ಪೇಸ್ ಎಕ್ಸ್ ಅಥವಾ ಟ್ವಿಟ್ಟರ್ ಕಂಪನಿ ಬಿಡಿ, ಸಣ್ಣ ಉದ್ಯಮವನ್ನು ಕೂಡ ನಡೆಸಕಾಗಲ್ಲ ಅನ್ನೋದು ಎಲ್ಲರಿಗೂ ತಿಳಿದ ವಿಚಾರವೇ ಅನ್ನಬಹುದು.
ಇದನ್ನೂ ಓದಿ: Viral Video : ಕರ್ನಾಟಕದ ಪುಟ್ಟ ಬಾಲಕಿ ಪಿಯಾನೋ ಪ್ರತಿಭೆಗೆ ಮನಸೋತ ಪ್ರಧಾನಿ ಮೋದಿ! ವಿಡಿಯೋ ಇಲ್ಲಿದೆ ನೋಡಿ
