Home » ನೀವು ಹೆಚ್ಚು ಉಪ್ಪಿನಕಾಯಿಯನ್ನು ತಿಂತಿರಾ?ಇದರಿಂದ ಏನೆಲ್ಲಾ ದುಷ್ಪರಿಣಾಮಗಳು ಇವೆ ಗೊತ್ತಾ?

ನೀವು ಹೆಚ್ಚು ಉಪ್ಪಿನಕಾಯಿಯನ್ನು ತಿಂತಿರಾ?ಇದರಿಂದ ಏನೆಲ್ಲಾ ದುಷ್ಪರಿಣಾಮಗಳು ಇವೆ ಗೊತ್ತಾ?

0 comments

ಊಟದ ಜೊತೆ ಉಪ್ಪಿನಕಾಯಿ ಒಂದಿದ್ದರೆ ಸಾಕು ಅದರ ಟೆಸ್ಟ್ ಬೇರೆ. ಕೆಲವೊಬ್ಬರಿಗೆ ಉಪ್ಪಿನಕಾಯಿ ಇನ್ನು ಕೆಲವೊಬ್ಬರಿಗೆ ತುಪ್ಪ, ಹಾಲು, ಮೊಸರು ಹೀಗೆ ನಾನಾ ರೀತಿಯ ಪದಾರ್ಥಗಳನ್ನ ಮಿಶ್ರಣ ಮಾಡಿಕೊಂಡು ತಿನ್ನುವುದೆಂದರೆ ಬಹಳ ಅಚ್ಚು ಮೆಚ್ಚು ಆಗಿರುತ್ತೆ.

ಆದರೆ ಅತಿಯಾದರೆ ಅಮೃತವು ಕೂಡ ವಿಷ ಎಂಬಂತೆ ಉಪ್ಪಿನಕಾಯಿ ಜಾಸ್ತಿ ಆಗಬಾರದು.ಅದರ ಖಾರ ಬಹಳ. ಇದರಿಂದ ಬಿಪಿ ಹೆಚ್ಚಾಗುವಂತಹ ಸಾಧ್ಯತೆ ಇರುತ್ತದೆ ಮತ್ತು ಉಷ್ಣಾಂಶ ಕೂಡ ದೇಹದಲ್ಲಿ ಹೆಚ್ಚಾಗಿ ಹುಣ್ಣು ಆಗುವಂತಹ ಸಾಧ್ಯತೆ ಹೆಚ್ಚು. ಇನ್ನು ಪೈಲ್ಸ್ ಆದವರಿಗೆ ಇದಂತೂ ಹಾನಿಕಾರಕವೆ ಎನ್ನಬಹುದು.

ಮತ್ತು ಜಾಸ್ತಿ ತಿಂದರೆ ಪೈಲ್ಸ್ ಆಗುವಂತಹ ಸಾಧ್ಯತೆ ಹೆಚ್ಚು. ಇದರಲ್ಲಿರುವ ಉಪ್ಪು ಮತ್ತು ಎಣ್ಣೆಯ ಜೊತೆಗೆ ಪ್ರಿಸರ್ವೇಟಿವ್ ಅಂಶವಿರುತ್ತದೆ. ಕೊಲೆಸ್ಟ್ರಾಲ್ ಸಮಸ್ಯೆ, ಹೃದಯಾಪಘಾತ ಆಗುವ ಸಂದರ್ಭ ಎದುರಾಗಬಹುದು.

ನೋಡಿದ್ರಲ್ಲ, ನಿಮ್ಮ ಫೇವರೆಟ್ ಉಪ್ಪಿನಕಾಯಿ ಅತಿಯಾದರೆ ಯಾವೆಲ್ಲ ದುಷ್ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು. ಇನ್ನು ಮುಂದೆ ಯೋಚಿಸಿ ಸೇವಿಸಿ.

You may also like

Leave a Comment