Home » Plastic water bottel: ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುವವರೇ ಎಚ್ಚರ !! ಇಲ್ಲಿದೆ ನೋಡಿ ಶಾಕಿಂಗ್ ವಿಚಾರ

Plastic water bottel: ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುವವರೇ ಎಚ್ಚರ !! ಇಲ್ಲಿದೆ ನೋಡಿ ಶಾಕಿಂಗ್ ವಿಚಾರ

1 comment
Plastic water bottel

Plastic water bottel: ಮನೆಯಿಂದ ಹೊರ ಹೋದಾಗ, ಟ್ರಿಪ್ ಹೊರಟಾಗ ಹೆಚ್ಚಿನವರು ಅನ್ನುವುದಕ್ಕಿಂತ ಎಲ್ಲರೂ ಅಂಗಡಿಗಳಲ್ಲಿ ದುಡ್ಡು ಕೊಟ್ಟು ನೀರಿನ ಬಾಟಲಿ ಖರೀದಿಸುತ್ತೇವೆ. ಜೊತೆಗೆ ಮನೆಯಲ್ಲೂ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು(Plastic water bottel) ತುಂಬಿಸಿಟ್ಟು ಕುಡಿಯುತ್ತೇವೆ. ಹೀಗೆ ನೀವು ಯಾವಾಗಲೂ ನೀರನ್ನು ಖರೀದಿಸಿ, ಪ್ಲಾಸ್ಟಿಕ್ ಬಾಟಲಿಯಲ್ಲಿ ಸೇವನೆ ಮಾಡ್ತೀರಾ? ಹಾಗಿದ್ರೆ ಇಲ್ಲಿದೆ ನೋಡಿ ಶಾಕಿಂಗ್ ವಿಚಾರ.

ಹೌದು, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಪ್ಲಾಸ್ಟಿಕ್ ಬಾಟಲಿ ಕುರಿತು ನಡೆಸಿದ ಅಧ್ಯಯನ ವರದಿ ಬೆಚ್ಚಿ ಬೀಳಿಸುತ್ತಿದೆ. ನಾವು ಕುಡಿಯುವ 1 ಲೀಟರ್ ಪ್ಲಾಸ್ಟಿಕ್ ಬಾಟಲಿ ನೀರಿನಲ್ಲಿ ಬರೋಬ್ಬರಿ 2.4 ಲಕ್ಷ ಪ್ಲಾಸ್ಟಿಕ್ ಸೂಕ್ಷ್ಮ ತುಣುಕುಗಳಿವೆ !! ಅಲ್ಲದೆ ಪ್ಲಾಸ್ಟಿಕ್ ಬಾಟಲಿ ನೀರು ಕುಡಿಯುವುದರಿಂದ ಮನುಷ್ಯನ ದೇಹದೊಳಕ್ಕೆ ಮೈಕ್ರೋಪ್ಲಾಸ್ಟಿಕ್ ಕಣಗಳು ಸೇರಿಕೊಳ್ಳುತ್ತದೆ ಎಂಬ ಸತ್ಯ ಕೂಡ ಬಯಲಾಗಿದೆ.

ಇದನ್ನೂ ಓದಿ: Killer CEO: ತನ್ನ ಮಗುವನ್ನೇ ಕೊಂದ ಹಂತಕಿ ಸಿಇಒ; ಗಂಡನ ಮೇಲಿನ ಸಿಟ್ಟಿಗೆ ಮಗು ಬಲಿಯೇ?

ಏನೇನು ಸಮಸ್ಯೆ ಉಂಟಾಗುತ್ತೆ?

• ಮೈಕ್ರೋಪ್ಲಾಸ್ಟಿಕ್ ಕಣಗಳು ಮನುಷ್ಯನ ಜೀವಕೋಶಗಳ ಸೇರಲಿದೆ. 

• ರಕ್ತಪ್ರವಾಹದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಬಹು ಅಂಗಾಗ ವೈಕಲ್ಯಗಳು ಸಂಭವಿಸಲಿದೆ. 

• ಈ ಮೈಕ್ರೋಪ್ಲಾಸ್ಟಿಕ್ ಗರ್ಭದಲ್ಲಿರುವ ಮಗುವಿನ ದೇಹವನ್ನೂ ಸೇರುತ್ತದೆ. ತಾಯಿಯ ಹೊಕ್ಕಳ ಬಳ್ಳಿ ಮೂಲಕ ಮಗುವಿನ ದೇಹ ಸೇರಿ ಮಗುವಿನ ಆರೋಗ್ಯವನ್ನೂ ಏರುಪೇರು ಮಾಡಲಿದೆ.

ಅಂದಹಾಗೆ ಪ್ಲಾಸ್ಟಿಕ್ ಬಾಟಲಿ ನೀರು ಆರೋಗ್ಯಕ್ಕೆ ಉತ್ತಮವಲ್ಲ ಅನ್ನೋದನ್ನು ಈಗಾಗಲೇ ಹಲವು ವೈದ್ಯರು ಹೇಳಿದ್ದಾರೆ. ಇದೀಗ ಅಧ್ಯಯನ ವರದಿಯೂ ಇದೇ ಮಾತನ್ನು ಪುನರುಚ್ಚರಿಸಿದೆ. ಹೀಗಾಗಿ ಇನ್ಮುಂದೆ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುವ ಮುನ್ನ ಇರಲಿ ಎಚ್ಚರ !!

You may also like

Leave a Comment