kitchen Sink Cleaning Tips : ಕಿಚನ್ (kitchen) ಸಿಂಕ್ (sink ) ಅನ್ನು ಎಷ್ಟೇ ಉಜ್ಜಿ ತೊಳೆದರು ಕೂಡ ಮೂಲೆಯಲ್ಲಿ ಸಣ್ಣ ಸಣ್ಣ ಪ್ರಮಾಣದಲ್ಲಿ ಜಿಡ್ಡು ಮಣ್ಣು ಉಳಿಯುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಿ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇರುತ್ತದೆ. ಅಲ್ಲದೆ ಕಿಚನ್ ಸಿಂಕ್ ಕೊಳೆಯಾದರೆ ದುರ್ವಾಸನೆ ಕೂಡ ಬರುತ್ತದೆ. ಇದು ಇಡೀ ಮನೆಯ ವಾತಾವರಣ ಹಾಳು ಮಾಡುತ್ತದೆ.
ನಮಗೆ ಅಡುಗೆ ಮನೆಯಲ್ಲಿ ಸಿಂಕ್ ಹೆಚ್ಚು ಅಗತ್ಯವಾಗಿರುತ್ತದೆ. ಅದೇ ರೀತಿ ಹೆಚ್ಚು ಕೊಳೆಯಾಗುವುದು ಕೂಡ ಅದೇ ಸಿಂಕ್ ಆಗಿರುತ್ತದೆ. ಮುಖ್ಯವಾಗಿ ಪಾತ್ರೆ ತೊಳೆಯುವಾಗ ಬೀಳುವ ಕಸ, ಅಡುಗೆ ಮನೆಯ ಎಣ್ಣೆಗಳು, ಜಿಡ್ಡು ಪದಾರ್ಥಗಳು ಸಿಂಕ್‌ನ್ನು ಹೆಚ್ಚು ಕೊಳಕು ಮಾಡುತ್ತವೆ. ಆದರೆ ಕಿಚನ್ ಸಿಂಕ್ ಸ್ವಚ್ಛಗೊಳಿಸುವುದೇ ಒಂದು ತಲೆನೋವು ಎಂದುಕೊಂಡರೆ ನಿಮ್ಮ ಕಲ್ಪನೆ ತಪ್ಪು. ಹೌದು, ಕಿಚನ್ ಸಿಂಕ್ ಅನ್ನು ಸುಲಭವಾಗಿ ಮನೆಯಲ್ಲಿನ ವಸ್ತುಗಳನ್ನೇ ಬಳಸಿಕೊಂಡು ಸ್ವಚ್ಛಗೊಳಿಸಬಹುದಾಗಿದೆ (kitchen Sink Cleaning Tips) . ಹೇಗೆಂದು ಬನ್ನಿ ನೋಡೋಣ.
ನಾವು ಅಡುಗೆಗೆ ಬಳಸುವ ಅಡಿಗೆ ಸೋಡಾ, ಅಡುಗೆಮನೆಯ ಸಿಂಕ್ ನಿಂದ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಈ ಅಡುಗೆ ಸೋಡಾವನ್ನು ಸಿಂಕ್ ಕಲೆಗಳ ಮೇಲೆ ಧಾರಾಳವಾಗಿ ಸಿಂಪಡಿಸಿ. ನಂತರ ಅದನ್ನು ಕ್ಲೀನ್ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಬಿಳಿ ವಿನೆಗರ್ ಮತ್ತು ಅಡಿಗೆ ಸೋಡಾ ಎರಡನ್ನೂ ತೆಗೆದುಕೊಂಡು ಅವುಗಳನ್ನು ಒಂದು ಬಟ್ಟಲಿನಲ್ಲಿ ಚೆನ್ನಾಗಿ ಕರಗಿಸಿ. ನಂತರ ಈ ಮಿಶ್ರಣವನ್ನು ಕೊಳಕು ಸಿಂಕ್ ಮೇಲೆ ವ್ಯಾಪಕವಾಗಿ ಸುರಿದು ನೆನೆಯಲು ಬಿಡಿ. ನಂತರ ಕ್ಲೀನ್ ಮಾಡಲು ನಿಮಗೆ ಸುಲಭವಾಗುತ್ತದೆ.
ನಿಂಬೆ ರಸ ಮತ್ತು ಅಡಿಗೆ ಸೋಡಾವನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಪೇಸ್ಟ್ ಮಾಡಿ. ಇವೆರಡನ್ನು ಕಲೆಯಾದ ಸಿಂಕ್ ಗೆ ಅನ್ವಯಿಸಿ ಮತ್ತು ಒಣಗಲು ಬಿಡಿ. ನಂತರ ಉತ್ತಮ ಫಲಿತಾಂಶಕ್ಕಾಗಿ ನೀರಿನಿಂದ ತೊಳೆಯಿರಿ.
ಕೆಂಪು ವೈನ್, ಕಡಿಮೆ ಆಲ್ಕೋಹಾಲ್ ಅಂಶವಿರುವ ಪಾನೀಯ, ಕಲೆಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ವೈನ್ ಅನ್ನು ಸಿಂಕ್ ನಲ್ಲಿ ವ್ಯಾಪಕವಾಗಿ ಸುರಿಯಿರಿ ಮತ್ತು ಅದನ್ನು 20 ನಿಮಿಷಗಳ ಕಾಲ ನೆನೆಯಲು ಬಿಡಿ. ನಂತರ ಸ್ವಚ್ಛಗೊಳಿಸಲು ಮತ್ತು ಉತ್ತಮ ಬದಲಾವಣೆಯನ್ನು ಕಾಣಲು ಸ್ಕ್ರಬ್ಬರ್ನಿಂದ ಉಜ್ಜಿ.
ಉಪ್ಪಿನೊಂದಿಗೆ ದೊಡ್ಡ ಪಾತ್ರೆಯಲ್ಲಿ ನೀರನ್ನು ಕುದಿಸಿ. ನಂತರ ಉತ್ತಮ ಬದಲಾವಣೆಯನ್ನು ಕಾಣಲು ಈ ಉಪ್ಪಿನ ದ್ರಾವಣವನ್ನು ಸಿಂಕ್ಗೆ ಸುರಿಯಿರಿ. ಆದರೆ, ಹೀಗೆ ಮಾಡುವಾಗ, ತ್ಯಾಜ್ಯವನ್ನು ಹೊರಹಾಕಲು ಕಡಿಮೆ ಸಾಂದ್ರತೆಯ ಪ್ಲಾಸ್ಟಿಕ್ ಕೊಳವೆಗಳನ್ನು ಬಳಸದಂತೆ ಎಚ್ಚರಿಕೆ ವಹಿಸಿ.
ಒಂದು ಪಾತ್ರೆಯಲ್ಲಿ ಅರ್ಧದಷ್ಟು ನೀರಿಗೆ ಈರುಳ್ಳಿ ಸಿಪ್ಪೆಯನ್ನು ಬೆರೆಸಿ, ಕುದಿಸಿ. ನಂತರ ಈ ನೀರನ್ನು ಸಿಂಕ್ಗೆ ಸುರಿಯಿರಿ. ನಂತರ ಸ್ವಚ್ಛಗೊಳಿಸಲು ಅದನ್ನು ನೆನೆಯಲು ಬಿಡಿ.
ಸಿಂಕ್ ನಲ್ಲಿ ಅಂಟಿಕೊಂಡಿರುವಂತಹ ಎಣ್ಣೆಯಂತಹ ಜಿಡ್ಡಿನ ಪದಾರ್ಥಗಳನ್ನು ದೂರ ಮಾಡಲು ಬಿಸಿ ನೀರು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುವುದು. ಹೀಗಾಗಿ ಸಿಂಕ್ ಗೆ ಬಿಸಿ ನೀರು ಹಾಕಿದರೆ ಒಳ್ಳೆಯದು. ಸ್ವಲ್ಪ ಬ್ಲೀಚಿಂಗ್ ಹುಡಿ ಹಾಕಿಕೊಂಡು ಬಳಿಕ ಬಿಸಿ ನೀರು ಹಾಕಿ.
ಸಿಂಕ್ ನ್ನು ತುಂಬಾ ಆಳವಾಗಿ ಶುಚಿ ಮಾಡಬೇಕಿದ್ದರೆ, ಆಗ ನೀವು ವಿನೇಗರ್ ಮತ್ತು ಲಿಂಬೆರಸವನ್ನು ಬಳಸಬೇಕು. ಲಿಂಬೆ ಮತ್ತು ವಿನೇಗರ್ ನಲ್ಲಿ ನೈಸರ್ಗಿಕ ಆಮ್ಲವಿದ್ದು, ಇದು ಸಿಂಕ್ ಅನ್ನು ಶುಚಿ ಮಾಡುವುದು ಮತ್ತು ವಾಸನೆ ದೂರ ಮಾಡುವುದು.
ಬೇವಿನ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದ್ದು, ಸ್ವಲ್ಪ ಬೇವಿನ ಎಲೆಗಳನ್ನು ನೀರಿಗೆ ಹಾಕಿ ಕುದಿಸಬೇಕು ಈ ನೀರನ್ನು ಹಾಗೆ ಸಿಂಕ್ ನ ಒಳಗೆ ಹಾಕಿ. ಇದರ ಬಳಿಕ ಸೋಪ್ ವಾಟರ್ ಬಳಸಿಕೊಂಡು ಸಿಂಕ್ ನ್ನು ಸ್ಕ್ರಬ್ ಮಾಡಿದರೆ, ಅದರಿಂದ ಸಿಂಕ್ ಶುಚಿಯಾಗುವುದು.
ಒಂದು ಕಪ್ ನೀರಿಗೆ ಒಂದು ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು ಸೇರಿಸಿ, ಹುಣಸೆ ಹಣ್ಣಿನ ದ್ರಾವಣವನ್ನು ತಯಾರಿಸಿ. ನಂತರ ಅದಕ್ಕೆ ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ. ಸೋಂಕಿನ ಮೇಲೆ ಈ ಸಂಯುಕ್ತವನ್ನು ಅನ್ವಯಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
ಈ ರೀತಿಯಾಗಿ ಸುಲಭವಾಗಿ ಅಡುಗೆ ಸಿಂಕನ್ನು ಕಡಿಮೆ ಖರ್ಚಿನಲ್ಲಿ ಸ್ವಚ್ಛ ಗೊಳಿಸಬಹುದಾಗಿದೆ.
