Kitchen Tips: ಅಡುಗೆ ಮನೆಯ ಬಹುಮುಖ್ಯ ವಸ್ತು ಎಂದರೆ ಅದು ಮಿಕ್ಸರ್. ಇತ್ತೀಚಿನ ದಿನಗಳಲ್ಲಿ ರುಬ್ಬುವ ಕಲ್ಲುಗಳಿಗಿಂತಲೂ ಮಿಕ್ಸಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಮಿಕ್ಸಿಯಲ್ಲಿ ಕ್ಷಣಾರ್ಧದಲ್ಲಿ ಮಸಾಲೆಯನ್ನು ಪುಡಿಮಾಡಬಹುದು. ಈಗಂತೂ ಮಹಿಳೆಯರಿಗೆ ಮಿಕ್ಸರ್ ಇಲ್ದೇ ಇದ್ರೆ ಅಡುಗೆ ಮಾಡಲು ಆಗೋದೇ ಇಲ್ವೇನೋ ಅನ್ನೋ ಮಟ್ಟಿಗೆ ಜೀವನಕ್ಕೆ ಹಾಸುಹೊಕ್ಕಾಗಿದೆ. ಹಾಗಾಗಿ, ಮಹಿಳೆಯರಿಗೆ ಮಿಕ್ಸರ್ ವರದಾನವೇ ಸರಿ.
ಆದರೆ ಕೆಲವರ ಮನೆಯಲ್ಲಿ ಮಿಕ್ಸ್ ಜಾರ್ ವಿಪರೀತ ಕೊಳಕಾಗಿರುತ್ತದೆ. ಅದನ್ನು ಮುಟ್ಟೋದು ಕೂಡಾ ಕಷ್ಟವಾಗುತ್ತೆ. ಕೆಲವರಂತೂ ಮಿಕ್ಸಿಯನ್ನು ಬಳಸಿದ ಮೇಲೆ ಹಾಗೆಯೇ ಇಟ್ಟು ಬಿಡುತ್ತಾರೆ. ಅದನ್ನು ಸರಿಯಾಗಿ ಶುಚಿಗೊಳಿಸುವುದಿಲ್ಲ. ಮಸಾಲೆಯ ಕಲೆಗಳು ಬಿದ್ದಿರುತ್ತದೆ. ಮಿಕ್ಸಿಯ ಕ್ಲಿಪ್ಗಳಲ್ಲಿ ಮಸಾಲೆ ಅಂಟಿಕೊಂಡಿರುತ್ತದೆ. ಮಿಕ್ಸಿ ಕ್ಲೀನ್ ಮಾಡಲು ಪುರ್ಸೊತ್ತೇ ಇಲ್ಲಾ ಎನ್ನುವವರ ಜಾರ್ ಗತಿ ಅದೋಗತಿ ಆಗಿರುತ್ತೆ. ಹಾಗಾಗಿ ನೀವು ಉಜ್ಜಿ ಉಜ್ಜಿ ಜಾರ್ ಕ್ಲೀನ್ ಮಾಡ್ಬೇಕಾಗಿಲ್ಲ, ಕೆಲವೊಂದು ಸಿಂಪಲ್ ಟಿಪ್ಸ್ ಫಾಲೋ(Kitchen Tips) ಮಾಡಿದ್ರೆ ಸಾಕು. ಇದರಿಂದ ನಿಮ್ಮ ಮಿಕ್ಸಿ ಸ್ವಚ್ಚವಾಗುವುದಲ್ಲದೆ, ಬಳಸಲು ಸುಲಭವಾಗುತ್ತದೆ.
ನಿಂಬೆ ಹಣ್ಣಿನ ಸಿಪ್ಪೆ :- ನಿಮ್ಮ ಮಿಕ್ಸರ್ ಗ್ರೈಂಡರ್ಗಳನ್ನು ಸ್ವಚ್ಛಗೊಳಿಸಲು ಇದು ಅತ್ಯಂತ ಸುಲಭ ವಿಧಾನಗಳಲ್ಲಿ ಒಂದಾಗಿದೆ. ಅಡುಗೆಯಲ್ಲಿ ಹುಳಿ ಹಾಕುವುದಕ್ಕೋಸ್ಕರ ನಾವು ನಿಂಬೆಹಣ್ಣನ್ನು ಬಳಸಿಯೇ ಬಳಸುತ್ತೇವೆ. ಹಾಗೆ ಬಳಸಿದ ನಿಂಬೆಹಣ್ಣನ್ನು ಎಸೆಯುವ ಬದಲು ಅದರಿಂದ ಜಾರ್ ಗಳನ್ನು ತೊಳೆದರೆ, ಜಾರ್ ನ ಕಲೆಗಳು ಹೋಗುತ್ತದೆ ಅಲ್ಲದೇ ಹೆಚ್ಚಿನ ಹೊಳಪು ಕೂಡ ಬರುತ್ತದೆ.
ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆಮ್ಲವಿದೆ, ಇದು ಮೊಂಡುತನದ ಗ್ರೀಸ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಮಿಕ್ಸರ್ ಗ್ರೈಂಡರ್ಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ನಿಂಬೆ ಸಿಪ್ಪೆಗಳು ಕಲೆಗಳನ್ನು ಮತ್ತು ಕಟುವಾದ ವಾಸನೆಯನ್ನು ತೆಗೆದುಹಾಕುತ್ತದೆ. ನಿಂಬೆ ಹಣ್ಣಿನ ಪರಿಮಳ ಕೂಡ ಜಾರ್ ನಲ್ಲಿ ತುಂಬಿರುತ್ತದೆ.
ಉಪ್ಪು:- ಉಪ್ಪಂತೂ ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತದೆ. ‘ಉಪ್ಪಿಗಿಂತ ರುಚಿ ಬೇರೆ ಇಲ್ಲಾ’ ಅನ್ನೋ ಹಾಗೆ ಉಪ್ಪು ಅಡುಗೆಗೆ ಮಾತ್ರ ಉಪಯೋಗವಾಗುವುದಲ್ಲದೆ, ಜಾರ್ ಗಳನ್ನು ಸ್ವಚ್ಛಗೊಳಿಸಲೂ ಕೂಡ ಉಪಯೋಗವಾಗುತ್ತದೆ. ಉಪ್ಪಿಗೆ ಸ್ವಲ್ಪ ನೀರನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಜಾರ್ ಸುತ್ತಲೂ ಹಚ್ಚಿ ಸ್ವಲ್ಪ ಸಮಯ ಹಾಗೇ ಬಿಡಿ. ತುಸು ಗಂಟೆಗಳ ನಂತರ ಜಾರ್ ತೊಳೆದರೆ ಜಾರ್ ಕ್ಲೀನ್ ಆಗಿರುತ್ತದೆ ಮತ್ತು ಹೊಳಪು ಕೂಡ ಹೆಚ್ಚಿರುತ್ತದೆ.
ಬೇಕಿಂಗ್ ಪೌಡರ್:– ಬೇಕಿಂಗ್ ಪೌಡರ್ ಜೊತೆ ನೀರನ್ನು ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಬೇಕು. ನಂತರ ಜಾರ್ ಗೆ ಹಚ್ಚಿ ಹಾಗೇ ಬಿಡಿ. ಸ್ವಲ್ಪ ಸಮಯದ ನಂತರ ಮಿಕ್ಸಿ ಜಾರ್ ಅನ್ನು ತೊಳೆಯಿರಿ. ಇದರಿಂದ ಜಾರ್ ಸ್ವಚ್ಛವಾಗುತ್ತದೆ ಮತ್ತು ಜಾರ್ ನ ದುರ್ವಾಸನೆ ಕೂಡ ದೂರವಾಗುತ್ತದೆ.
ವಿನೆಗರ್:- ಪ್ರತಿಯೊಬ್ಬರ ಮನೆಯಲ್ಲಿ ಅಡುಗೆಗೆ ಮಸಾಲೆ ಪದಾರ್ಥಗಳನ್ನು ರುಬ್ಬುತ್ತಾರೆ. ಅದಕ್ಕಾಗಿ ಮಿಕ್ಸರ್ ಗ್ರೈಂಡರ್ಗಳನ್ನು ಬಹುತೇಕ ದೈನಂದಿನ ಬಳಕೆ ಮಾಡುತ್ತಾರೆ. ನಿಯಮಿತವಾಗಿ ಮಸಾಲಾಗಳೊಂದಿಗೆ ಅಡುಗೆ ಮಾಡುವುದು ಸರಿಯಾಗಿ ಸ್ವಚ್ಛಗೊಳಿಸದಿದ್ದಲ್ಲಿ ಹೆಚ್ಚು ಕಠಿಣವಾದ ಕಲೆಗಳು ಹಾಗೇ ಉಳಿದು ಬಿಡುತ್ತವೆ. ವಿನೆಗರ್ ಮತ್ತು ನೀರಿನ ದ್ರಾವಣವು ಈ ಕಲೆಗಳನ್ನು ಸುಲಭವಾಗಿ ತೊಡೆದುಹಾಕಲು ಸಹಾಯ ಮಾಡುತ್ತದೆ.
ಎರಡು ಟೇಬಲ್ಸ್ಪೂನ್ ವಿನೆಗರ್ ಅನ್ನು ಸ್ವಲ್ಪ ನೀರಿನೊಂದಿಗೆ ಮಿಶ್ರಣ ಮಾಡಿ ಮತ್ತು ಅದನ್ನು ಮಿಕ್ಸರ್ ಜಾರ್ ಗೆ ಹಚ್ಚಿ ಸ್ವಲ್ಪ ಸಮಯ ಬಿಡಿ. ಕೆಲವು ಸೆಕೆಂಡುಗಳ ಕಾಲ ದ್ರಾವಣವನ್ನು ಇಟ್ಟು ನಂತರ ಅದನ್ನು ನೀರಿನಿಂದ ತೊಳೆಯಿರಿ. ತಿಂಗಳಲ್ಲಿ ಒಂದೆರಡು ಬಾರಿ ಹೀಗೆ ಮಾಡಿ ಜಾರ್ ಅನ್ನು ಸ್ವಚ್ಛಗೊಳಿಸಬಹುದು.
ಬೇಕಿಂಗ್ ಸೋಡಾ:- ಮಿಕ್ಸರ್ ಒಳಗೆ ಸ್ವಲ್ಪ ಸಮಯದವರೆಗೆ ಕುಳಿತಿರುವ ಬ್ಯಾಟರ್ ಮತ್ತು ಪ್ಯೂರಿಗಳನ್ನು, ಮಸಾಲೆಗಳನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುವಲ್ಲಿ ಅಡುಗೆ ಸೋಡಾ ಉತ್ತಮವಾಗಿದೆ. ಇದು ಸೌಮ್ಯವಾದ ಕ್ಷಾರೀಯ ಗುಣಗಳನ್ನು ಹೊಂದಿದ್ದು, ನೀರಿನಲ್ಲಿ ಸುಲಭವಾಗಿ ಕರಗುವ ಕಠಿಣವಾದ ಗ್ರೀಸ್ ಅನ್ನು ಸ್ವಚ್ಛಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಅಡಿಗೆ ಸೋಡಾದೊಂದಿಗೆ ಮಿಕ್ಸರ್ ಅನ್ನು ಸ್ವಚ್ಛಗೊಳಿಸಲು, ಮಿಕ್ಸರ್ ಗ್ರೈಂಡರ್ ಜಾರ್ಗೆ ಸಮಾನ ಪ್ರಮಾಣದ ನೀರು ಮತ್ತು ಅಡಿಗೆ ಸೋಡಾವನ್ನು ಸೇರಿಸಿ. ಮಿಕ್ಸರ್ ಅನ್ನು ಒಂದೆರಡು ಸೆಕೆಂಡುಗಳ ಕಾಲ ಚಲಾಯಿಸಿ ಮತ್ತು ಮಿಶ್ರಣವನ್ನು ಸುರಿಯಿರಿ. ನೀವು ಇನ್ನೂ ಕೆಲವು ಕಲೆಗಳನ್ನು ಕಂಡರೆ, ಅವುಗಳನ್ನು ಉಗುರು ಬೆಚ್ಚಗಿನ ನೀರು ಮತ್ತು ಸಾಬೂನಿನಿಂದ ತೊಳೆಯಿರಿ.
ಅಡುಗೆ ಸೋಡಾ ಮತ್ತು ನಿಂಬೆ ಹಣ್ಣು :- ಅಡುಗೆ ಸೋಡಾ ಮತ್ತು ನಿಂಬೆರಸವನ್ನು ಚೆನ್ನಾಗಿ ಬೆರೆಸಿ ಮಿಕ್ಸಿ ಮತ್ತು ಜಾರ್ ಎರಡನ್ನೂ ಸ್ವಚ್ಛಗೊಳಿಸಬಹುದು. ಇದರಿಂದ ಜಿಡ್ಡು, ಮಸಾಲೆ ಕಲೆಗಳು ಮಾಯವಾಗುತ್ತದೆ.
ಮಾರುಕಟ್ಟೆಯಲ್ಲಿ ಸಿಗುತ್ತೆ ಲಿಕ್ವಿಡ್:- ಮಾರುಕಟ್ಟೆಯಲ್ಲಿ ಕಾಣಸಿಗುವ ಕೆಲವು ಲಿಕ್ವಿಡ್ ಡಿಟರ್ಜೆಂಟ್ ಗಳು, ಆಲ್ಕೋಹಾಲ್ ಗಳಿಂದಲೂ ಜಾರ್ ಗಳನ್ನು ಸ್ವಚ್ಛಗೊಳಿಸಬಹುದು. ಜಾರ್ ಗಳನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿದರೆ ಅದರಲ್ಲಿರುವ ಕೀಟಾಣುಗಳು ನಾಶವಾಗುತ್ತವೆ. 60-80 ಪ್ರತಿಶತದಷ್ಟು ಆಲ್ಕೋಹಾಲ್ ಹೊಂದಿರುವ ಆಲ್ಕೋಹಾಲ್ ಅನ್ನು ಉಜ್ಜಿದರೆ ಅದು ಉತ್ತಮವಾಗಿರುತ್ತದೆ, ಏಕೆಂದರೆ 60 ಪ್ರತಿಶತಕ್ಕಿಂತ ಕಡಿಮೆ ಯಾವುದಾದರೂ ಸೂಕ್ಷ್ಮಜೀವಿಗಳನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ.
ಇದನ್ನೂ ಓದಿ: Kitchen Tips : ಪಾತ್ರೆ ತೊಳೆವ ಸೋಪನ್ನು ಈ ರೀತಿ ಬಳಸಿದರೆ ಮುಂದೆ ಸೈಡ್ ಇಫೆಕ್ಟ್ ಗ್ಯಾರಂಟಿ!!
