Cooking Tips: ಪರಿಪೂರ್ಣವಾದ ದೋಸೆ ಮಾಡಲು ಕಷ್ಟ ಸಾಧ್ಯ ಎನ್ನುವುದು ಕೆಲವರ ಕಲ್ಪನೆ ಸುಳ್ಳು. ದೋಸೆ ಮಾಡುವಾಗಲೆಲ್ಲ ಅದು ತವಾಕ್ಕೆ ಅಂಟಿಕೊಳ್ಳುತ್ತದೆ ಮತ್ತು ತೆಗೆಯಲು ಕಷ್ಟವಾಗುತ್ತದೆ ಎನ್ನುವವರು ಇನ್ಮುಂದೆ ಚಿಂತೆ ಬಿಟ್ಟಾಕಿ. ಕೆಲ ಸಿಂಪಲ್ ಟಿಪ್ಸ್ (Cooking Tips) ಫಾಲೋ ಮಾಡಿದರೆ ದೋಸೆ ಎಷ್ಟೇ ಗಟ್ಟಿಯಾಗಿದ್ದರೂ ಸೂಪರ್ ಸಾಫ್ಟ್ ಆಗಿ ತವಾದಿಂದ ಮೇಲೆ ಏಳುತ್ತದೆ.
ಕಬ್ಬಿಣದ ತವಾದ ಮೇಲೆ ಮಾಡಿದ ದೋಸೆ ತಿನ್ನಲು ವಿಶಿಷ್ಟವಾದ ರುಚಿ ಇರುತ್ತದೆ. ಆದರೆ ಸರಿಯಾಗಿ ಮಾಡಿದರೆ ಮಾತ್ರ ದೋಸೆ ರುಚಿಯಾಗಿರುತ್ತದೆ. ಆದರೆ ಎಷ್ಟೋ ಮಂದಿಗೆ ದೋಸೆಯನ್ನು ಅಚ್ಚುಕಟ್ಟಾಗಿ ಮಾಡಲು ಸಮಯವಿರುವುದಿಲ್ಲ. ಹಾಗಾಗಿ ಅಂತಹವರು ದೋಸೆ ಮಾಡುವಾಗಲೆಲ್ಲ ಅದು ತವಾಕ್ಕೆ ಅಂಟಿಕೊಳ್ಳುತ್ತದೆ ಮತ್ತು ತೆಗೆಯಲು ಕಷ್ಟವಾಗುತ್ತದೆ. ಈ ಕಾರಣದಿಂದ ಬಹಳಷ್ಟು ಮಂದಿ ನಾನ್ ಸ್ಟಿಕ್ ತವಾ ಖರೀದಿಸಿ ಬಳಸುತ್ತಾರೆ. ಆದರೆ ಇನ್ಮುಂದೆ ಈ ಚಿಂತೆ ಬಿಟ್ಟಾಕಿ. ಏಕೆಂದರೆ ಕೆಲ ಸಿಂಪಲ್ ಟಿಪ್ಸ್ ಫಾಲೋ ಮಾಡಿದರೆ ದೋಸೆ ಎಷ್ಟೇ ಗಟ್ಟಿಯಾಗಿದ್ದರೂ ಸೂಪರ್ ಸಾಫ್ಟ್ ಆಗಿ ತವಾದಿಂದ ಮೇಲೆ ಏಳುತ್ತದೆ.
ದೋಸೆ ಬೇಯಿಸುವ ಮುನ್ನ ತವಾ ಸ್ವಚ್ಛಗೊಳಿಸಿ:
ದೋಸೆ ಮಾಡುವ ಮುನ್ನ ದೋಸೆಯ ಕಲ್ಲು ಸ್ವಚ್ಛವಾಗಿರಬೇಕು. ಹಾಗಾಗಿ ದೋಸೆ ಕಲ್ಲಿನ ಮೇಲೆ ಧೂಳು, ಹಿಂದೆ ಬೇಯಿಸಿದ ದೋಸೆಯ ಅವಶೇಷಗಳು, ಯಾವುದಾದರೂ ಸೀದು ಹೋದ ಕಣಗಳು ಇದ್ದರೆ, ಅವುಗಳನ್ನು ಹತ್ತಿ ಬಟ್ಟೆಯನ್ನು ಬಳಸಿ ಸಂಪೂರ್ಣವಾಗಿ ಸ್ವಚ್ಛಗೊಳಿಸಿ.
ಈರುಳ್ಳಿ ಅಥವಾ ಆಲೂಗೆಡ್ಡೆಯಿಂದ ಉಜ್ಜಿ :
ಕಲ್ಲನ್ನು ಸ್ವಚ್ಛಗೊಳಿಸಿದ ನಂತರ ಮುಂದಿನ ಹಂತವೆಂದರೆ ಆಲೂಗಡ್ಡೆ ಅಥವಾ ಈರುಳ್ಳಿಯ ಕಾಲು ಭಾಗವನ್ನು ಕತ್ತರಿಸಿ ಒಂದು ಹನಿ ಎಣ್ಣೆಯಿಂದ ಕಲ್ಲಿನ ಸುತ್ತಲೂ ಉಜ್ಜಿ.
ನಿಧಾನವಾಗಿ ಹಿಟ್ಟು ಸುರಿಯಿರಿ:
ಎಣ್ಣೆ ಉಜ್ಜಿದ ನಂತರ, ಹಿಟ್ಟನ್ನು ಸುರಿದು, ಅದನ್ನು ರೌಂಡ್ ಶೇಪ್ ಆಗಿ ಮಾಡಿ. ನಂತರ ಮೇಲೆ ಎಣ್ಣೆ ಹಾಕಿ ಹೊಂಬಣ್ಣಕ್ಕೆ ತಿರುಗಿದಾಗ ದೋಸೆ ಅಂಟದಂತೆ ಸುಂದರವಾಗಿ ಬರುತ್ತದೆ.
ಫ್ರಿಜ್ನಿಂದ ನೇರವಾಗಿ ಬಳಸಬೇಡಿ: ದೋಸೆ ಹಿಟ್ಟನ್ನು ಫ್ರಿಜ್ನಲ್ಲಿ ಹಿಟ್ಟು ತೆಗೆದ ತಕ್ಷಣ ದೋಸೆ ಮಾಡಬಾರದು. ನೀವು ದೋಸೆಯನ್ನು ಬೇಯಿಸುವುದಕ್ಕೂ 15 ಅಥವಾ 20 ನಿಮಿಷಗಳ ಮುಂಚಿತವಾಗಿ ಹಿಟ್ಟನ್ನು ತೆಗೆದು ಹೊರಗೆ ಇಡಿ. ಹೀಗೆ ಮಾಡುವುದರಿಂದ ಅದು ಕಲ್ಲಿಗೆ ಕೂಡ ಅಂಟಿಕೊಳ್ಳುವುದಿಲ್ಲ.
ಸರಿಯಾದ ನೀರಿನ ಮಿಕ್ಸಪ್ ಮಾಡಿ:
ದೋಸೆ ಸರಿಯಾಗಿ ಬರದಿರಲು ನೀರಿನ ಕೊರತೆಯೂ ಒಂದು ಕಾರಣ. ಅಂದರೆ ದೋಸೆ ಬೇಯಿಸುವ ವೇಳೆ ಹೆಚ್ಚು ನೀರು ಹಾಕಬೇಡಿ. ಹಾಗೆ ಹಾಕಿದರೆ ದೋಸೆ ಕಲ್ಲಿಗೆ ಅಂಟಿಕೊಳ್ಳುತ್ತದೆ. ಆದ್ದರಿಂದ ಇದು ಸ್ವಲ್ಪ ಗಟ್ಟಿಯಾಗಿರಬೇಕು.
ಹೆಚ್ಚು ಎಣ್ಣೆ ಹಚ್ಚಬೇಡಿ: ದೋಸೆ ಕಲ್ಲಿನ ಮೇಲೆ ಹಿಟ್ಟನ್ನು ಸುರಿಯುವ ಮುನ್ನ ಹೆಚ್ಚು ಎಣ್ಣೆ ಹಚ್ಚಿ ದೋಸೆ ಕಲ್ಲನ್ನು ಉಜ್ಜಿದರೆ ಹಿಟ್ಟು ದೋಸೆ ಕಲ್ಲಿಗೆ ಅಂಟಿಕೊಳ್ಳುವುದಿಲ್ಲ. ಹಾಗಾಗಿ ಆ ತಪ್ಪನ್ನು ಮಾಡಬೇಡಿ.
ಸರಿಯಾದ ಉರಿಯಲ್ಲಿ ಬೇಯಿಸಿ:
ದೋಸಾ ಮಾಡುವ ತಾಪಮಾನವು ತುಂಬಾ ಹೆಚ್ಚಿರಬಾರದು ಅಥವಾ ತುಂಬಾ ಕಡಿಮೆ ಇರಬಾರದು. ತವಾ ತುಂಬಾ ಬಿಸಿಯಾಗಿದ್ದರೆ, ಶಾಖವನ್ನು ತಗ್ಗಿಸಲು ಅದರ ಮೇಲೆ ಸ್ವಲ್ಪ ನೀರು ಚಿಮುಕಿಸಿ.
ಇದನ್ನೂ ಓದಿ: ವಾಸ್ತು ಪ್ರಕಾರ ಮನೆಯಲ್ಲಿ ಕಸದ ಬುಟ್ಟಿಗಳನ್ನು ಎಲ್ಲಿಡಬೇಕು? ಕಸವನ್ನು ಎಲ್ಲಿ ಎಸೆಯಬೇಕು ?
