Home » Kitchen hacks: ಮನೆಯಲ್ಲಿ ಇಟ್ಟ ಅಕ್ಕಿಗೆ ಹುಳಗಳ ಕಾಟವೇ?! ಈ ಸುಲಭ ವಿಧಾನದಿಂದ ಸ್ವಚ್ಛ ಮಾಡಿ

Kitchen hacks: ಮನೆಯಲ್ಲಿ ಇಟ್ಟ ಅಕ್ಕಿಗೆ ಹುಳಗಳ ಕಾಟವೇ?! ಈ ಸುಲಭ ವಿಧಾನದಿಂದ ಸ್ವಚ್ಛ ಮಾಡಿ

1 comment
Kitchen hacks

Kitchen Hacks : ಬಹುತೇಕರು ಅಕ್ಕಿಯನ್ನು ಪ್ರಮುಖ ಆಹಾರ ಪದಾರ್ಥವಾಗಿ ಬಳಸಲಾಗುತ್ತದೆ. ಅಕ್ಕಿಯಲ್ಲಿ ಹಲವು ವಿಧಗಳಿದ್ದು, ಬಾಸುಮತಿ, ಸಣ್ಣಕ್ಕಿ, ಕೆಂಪಕ್ಕಿ, ಬೆಳ್ತಿಗೆ, ಕುಚ್ಚಿಲು ಇತ್ಯಾದಿ. ಈ ಅಕ್ಕಿಯಿಂದ ಹತ್ತಾರು ರೀತಿಯ ಆಹಾರಗಳನ್ನು ತಯಾರಿಸಲಾಗುತ್ತದೆ. ಆದರೆ ಹಲವು ದಿನಗಳ ಕಾಲ ಅಕ್ಕಿಯನ್ನು ಹಾಳಾಗದಂತೆ ಉಳಿಸಿಕೊಳ್ಳುವುದು ದೊಡ್ಡ ಸವಾಲು.

ಇನ್ನು ಮಾರುಕಟ್ಟೆಯಿಂದ ತಂದ ಅಕ್ಕಿಯಲ್ಲಿ ಸಾಕಷ್ಟು ಪ್ರಮಾಣದ ಕಸ, ಧೂಳು ಇರುತ್ತದೆ. ಅಲ್ಲದೇ ಅಕ್ಕಿ ಹಾಳಾಗಬಾರದು ಎಂಬ ಕಾರಣಕ್ಕೆ ರಾಸಾಯನಿಕ ಪದಾರ್ಥಗಳನ್ನು ಬೆರೆಸಿರಲಾಗುತ್ತದೆ. ಅದಲ್ಲದೆ ಅಕ್ಕಿಯನ್ನು ಹಲವಾರು ದಿನಗಳವರೆಗೆ ಸಂಗ್ರಹಿಸಿದರೆ, ಬದಲಾದ ವಾತಾವರಣ, ಸರಿಯಾಗಿ ಸಂರಕ್ಷಿಸಿ ಇಡದೇ ಇರುವುದು ಸೇರಿದಂತೆ ನಾನಾ ಕಾರಣಗಳಿಂದ ಅಕ್ಕಿಯಲ್ಲಿ ಉಂಡೆಗಳು, ಹುಳುಗಳು ಉಂಟಾಗುತ್ತದೆ. ಆದರೆ ಅಕ್ಕಿಯಲ್ಲಿ ಉಂಡೆಗಳು ಅಥವಾ ಹುಳುಗಳಿವೆ ಎಂದು ಅದನ್ನು ಎಸೆಯಬೇಕಾಗಿಲ್ಲ. ಅದನ್ನು ಸ್ವಚ್ಛಗೊಳಿಸಿ ಸುಲಭವಾಗಿ ಉಪಯೋಗಿಸಬಹುದಾಗಿದೆ. ಅದಕ್ಕಾಗಿ ಇಲ್ಲಿ ಸಲಹೆ (Kitchen Hacks) ನೀಡಲಾಗಿದೆ.

ಮುಖ್ಯವಾಗಿ ಅಕ್ಕಿಯಲ್ಲಿರುವ ಕಸ, ಧೂಳು, ರಾಸಾಯನಿಕ ಅಂಶಗಳು, ಹುಳುಗಳು ಸ್ವಚ್ಛಗೊಳ್ಳಬೇಕೆಂದರೆ ಉಗುರು ಬೆಚ್ಚಗಿನ ನೀರನ್ನು ಅಕ್ಕಿಯನ್ನು ತೊಳೆಯಿರಿ. ಇನ್ನು ಅಕ್ಕಿಯಲ್ಲಿ ಹುಳುಗಳಾಗಿದ್ದರೆ ಚಿಕ್ಕ ರಂಧ್ರಗಳಿರುವ ಪಾತ್ರೆಯಲ್ಲಿ ಹಾಕಿ ತೊಳೆಯಿರಿ. ಇದರಿಂದ ಅಕ್ಕಿಯಲ್ಲಿರುವ ಹುಳುಗಳು ನೀರಿನ ಜೊತೆ ರಂಧ್ರದಲ್ಲಿ ಹೋಗಿ ಬಿಡುತ್ತದೆ ಮತ್ತು ಅಕ್ಕಿ ಸ್ವಚ್ಛವಾಗುತ್ತದೆ.

ನಂತರ ಅಕ್ಕಿಯಲ್ಲಿನ ಹುಳುಗಳನ್ನು ಸುಲಭವಾಗಿ ಹೋಗಲಾಡಿಸಲು ಬಿಸಿಲಿನಲ್ಲಿ ಅಕ್ಕಿಯನ್ನು ಹರಡಿ. ಇದರಿಂದ ಬಿಸಿಲಿನ ತಾಪಕ್ಕೆ ಹುಳಗಳು ಅಕ್ಕಿಯಿಂದ ಹೊರಗೆ ಬರುತ್ತದೆ. ಅಗತ್ಯವಿದ್ದರೆ ಅಕ್ಕಿಯನ್ನು ತೊಳೆದು ಕೂಡ ಮೇಲಿನ ವಿಧಾನ ಅನುಸರಿಸಬಹುದು.

ಅಕ್ಕಿಯನ್ನು ಹಾಳಾಗದಂತೆ ಇಡಲು ಮಾರುಕಟ್ಟೆಯಿಂದ ತಂದ ತಕ್ಷಣ ಅಕ್ಕಿಯನ್ನು ಬಿಸಿಲಿನಲ್ಲಿ ಹರವಿಡಿ. ನಂತರ ಗಾಳಿ ತಾಗದಂತೆ ಡಬ್ಬದಲ್ಲಿ ಮುಚ್ಚಿಡಿ. ಇನ್ನು ಅಕ್ಕಿಯನ್ನು ಸಂಗ್ರಹಿಸುವಾಗ ಶುಂಠಿ, ಬೆಳ್ಳುಳ್ಳಿ ಮತ್ತು ಅರಿಶಿನದಂತಹ ಕೆಲವು ಮಸಾಲೆಗಳು ಮತ್ತು ಗಿಡಮೂಲಿಕೆಗಳನ್ನು ಸಹ ಇರಿಸಬಹುದು.

ಅಥವಾ ಅಕ್ಕಿಯನ್ನು ಸಂಗ್ರಹಿಸಿಡುವಾಗ ಲವಂಗದ ಎಲೆಗಳನ್ನು ಹಾಕಿಡಿ. ಅಥವಾ ಕ್ರಿಮಿ ಕೀಟಗಳು ಬರದಂತೆ ಲವಂಗವನ್ನು ಬಟ್ಟೆಯಲ್ಲಿ ಗಂಟುಕಟ್ಟಿ ಹಾಕಿಡಬಹುದು ಇದರಿಂದ ಹುಳು ಅಥವಾ ಉಂಡೆಗಳಾಗುವುದನ್ನು ತಡೆಯಬಹುದಾಗಿದೆ.

ಇದನ್ನೂ ಓದಿ: ರೇಷನ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್ – ಸಚಿವರಿಂದ ಹೊಸ ಘೋಷಣೆ!!

You may also like

Leave a Comment