Summer 2023 and mango : ಈ ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣನ್ನು (Mango) ತಿನ್ನಲು ಎಲ್ಲರೂ ಆಸೆ ಪಡುತ್ತಾರೆ. ಆದರೆ ತಿನ್ನುವ ಮುನ್ನ ನೆನೆಸಿಟ್ಟು ತಿನ್ನಬೇಕಾ? ನೆನೆಸಿಟ್ಟು ತಿನ್ನುವುದರಿಂದ(Summer 2023 and mango) ಆಗುವ ಪ್ರಯೋಜನವೇನು? ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಏಪ್ರಿಲ್ ಮೇ ತಿಂಗಳು ನೆತ್ತಿಗೆ ಬಿಸಿ ಏರಿಸುವ ಕಾಲ. ಈ ಬಿಸಿಲಿನಲ್ಲಿ ಹೆಚ್ಚಾಗಿ ಹಣ್ಣುಗಳನ್ನು ತಿನ್ನಬೇಕು, ಮತ್ತು ಹಣ್ಣುಗಳು ಈ ಸಂದರ್ಭದಲ್ಲಿ ದೇಹಕ್ಕೆ ಉತ್ತಮ. ಮಾರುಕಟ್ಟೆಯಲ್ಲಿ ಹಲವು ಹಣ್ಣುಗಳು ದೊರಕುತ್ತದೆ. ಅದರಲ್ಲಿ ಮಾವಿನ ಹಣ್ಣು ಕೂಡಾ ಒಂದು. ಮಾವಿನ ಹಣ್ಣು ಅಂದರೆ ಎಲ್ಲರಿಗೂ ಬಲು ಪ್ರಿಯಾವಾದದ್ದು. ಈಗ ಹಣ್ಣಿನ ಮಾರುಕಟ್ಟೆಯ ತುಂಬಾ ಮಾವಿನದ್ದೇ ಸದ್ದು.
ಈ ಕಾಲವನ್ನು ಮಾವಿನ ಕಾಲವೆಂದೇ ಕರೆಯಬಹುದು. ಎಲ್ಲಿ ನೋಡಿದರೂ ಮಾವಿನ ಪರಿಮಳವೇ. ಹಣ್ಣುಗಳ ರಾಜನಾದ ಮಾವನ್ನು ತಿನ್ನಲು ಈ ಬೇಸಿಗೆ ಕಾಲಕ್ಕೆ ಜನರು ಕಾಯುತ್ತಲೇ ಇರುತ್ತಾರೆ. ಈ ಹಣ್ಣು ಹೊಟ್ಟೆ ಹಸಿವನ್ನು ತಣಿಸುವುದಲ್ಲದೆ ಬಾಯಿಯ ಚಪಲವನ್ನು ತೀರಿಸುತ್ತದೆ. ಮಾವಿನ ಹಣ್ಣು ಹಲವಾರು ಆರೋಗ್ಯ ಸಮಸ್ಯೆ ಕಡಿಮೆ ಮಾಡುತ್ತದೆ ಮತ್ತು ಇದರ ಸೇವನೆ ಯಿಂದ ಕೆಲವು ಆರೋಗ್ಯ ಪ್ರಯೋಜನಗಳು ಕೂಡ ಇವೆ. ಆದರೆ ಏಷ್ಟೋ ಜನರಿಗೆ ಮಾವಿನ ಹಣ್ಣು ತಿನ್ನುವ ವಿಧಾನವೇ ತಿಳಿದಿರುವುದಿಲ್ಲ.
ಮಾವಿನ ಹಣ್ಣುನ್ನು ಹೇಗೆ ತಿನ್ನಬೇಕು ಗೊತ್ತಾ? ಹಣ್ಣನ್ನು ಕೆಲ ಹೊತ್ತು ನೀರಿನಲ್ಲಿ ನೆನೆಸಿಟ್ಟು ನಂತರ ಸೇವಿಸಬೇಕಾ ? ಈ ರೀತಿ ತಿನ್ನುವುದರಿಂದ ಪ್ರಯೋಜನ ಏನೂ? ಈ ಎಲ್ಲಾ ಮಾಹಿತಿ ಇಲ್ಲಿದೆ ನೋಡಿ;
ಮಾವಿನ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಹಾಗೂ ನಾರಿನಾಂಶ ಅಧಿಕವಾಗಿರುತ್ತದೆ. ಮತ್ತು ವಿಟಮಿನ್ ಎ ಹಾಗೂ ಸಿ ಅಂಶವು ಇರುತ್ತದೆ. ಇವು ದೇಹಕ್ಕೆ ಶಕ್ತಿ ನೀಡುವುದು ಮಾತ್ರವಲ್ಲದೆ, ಜೀರ್ಣಶಕ್ತಿ ಹೆಚ್ಚಿಸುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗೂ ಪರಿಹಾರವನ್ನು ನೀಡುತ್ತದೆ. ಇದರ ಸೇವನೆಯು ಚರ್ಮ ಹಾಗೂ ಕೂದಾಲಿಗೂ ಉತ್ತಮ.
ಮಾವಿನ ಹಣ್ಣನ್ನು ನೆನೆಸಿ ತಿನ್ನುವುದರ ಉಪಯೋಗ.
ಕೆಲವು ಜನರು ಮಾವಿನ ಹಣ್ಣನ್ನು ತಂದ ಕೂಡಲೇ ಫ್ರಿಜ್ ನಲ್ಲಿ ಇಟ್ಟುಬಿಡುತ್ತಾರೆ, ಇನ್ನೂ ಕೆಲವರು ದೊಡ್ದ ಪಾತ್ರೆಯಲ್ಲಿ ನೀರನ್ನು ಹಾಕಿ ಮಾವಿನ ಹಣ್ಣನ್ನು ನೆನಸಿ ತಿನ್ನುತ್ತಾರೆ. ಮಾವಿನ ಹಣ್ಣನ್ನು ಸಾಮಾನ್ಯವಾಗಿ ನೆನಸಿ ತಿಂದರೆ ಹಲವಾರು ಆರೋಗ್ಯ ಪ್ರಯೋಜನಗಳು ಇವೆ. ಇದರ ಬಗ್ಗೆ ತಜ್ಞರು ಏನು ಹೇಳಿದ್ದಾರೆ ತಿಳಿಯಿರಿ.
ಮಾವಿನ ಹಣ್ಣನ್ನು ಸರಿಯಾದ ವಿಧಾನದಲ್ಲಿ ಸೇವಿಸುವುದು ಮುಖ್ಯ. ತಿನ್ನುವ ಮೊದಲು ಹಣ್ಣನ್ನು ನೀರಿನಲ್ಲಿ ನೆನೆಸಿಡುವುದರಿಂದ ಪೋಷಣೆಗಳನ್ನು ಪಡೆಯಲು ಸಾಧ್ಯ. ಮಾವಿನ ಹಣ್ಣಿನಲ್ಲಿ ಫೈಟಿಕ್ ಆಮ್ಲ ಇರುತ್ತದೆ, ಆದ್ದರಿಂದ ನೀರಿನಲ್ಲಿ ನೆನೆಸಿಟ್ಟು ತಿನ್ನುವುದರಿಂದ ಫೈಟಿಕ್ ಆಮ್ಲವನ್ನು ತೊಡೆದು ಹಾಕಬಹುದು. ಈ ಆಮ್ಲವು ಪೋಷಕಾಂಶಕ್ಕೆ ವಿರೋಧಿ. ಈ ಆಮ್ಲವು ದೇಹ ಪೋಷಕಾಂಶವನ್ನು ಹಿರಿಕೊಳ್ಳಲು ಬಿಡುವುದಿಲ್ಲ. ಈ ಕಾರಣಕ್ಕೆ ನೆನಸಿ ತಿನ್ನುವುದು ಉತ್ತಮ ಎಂದು ಝನ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಯೆಟಿಷಿಯನ್ ಪ್ರಿಯಾ ಅವರು ತಿಳಿಸಿದ್ದಾರೆ.
ಹಿಂದಿನ ಕಾಲದಿಂದಲೂ ಮಾವಿನ ಹಣ್ಣನ್ನು ನೆನಸಿಯೇ ತಿನ್ನುತ್ತಿದ್ದರು, ಮತ್ತು ಅದಕ್ಕೆ ಒಂದು ಉತ್ತಮ ಕಾರಣವಿದೆ. ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸಿ ಇಡುವುದರಿಂದ ಕೀಟನಾಶಕಗಳನ್ನು ನಾಶವಾಗುತ್ತದೆ. ಪೋಷಕಾಂಶ, ಖನಿಜಾಂಶ ಹಾಗೂ ಕ್ಯಾಲ್ಸಿಯಂಗಳು ಹಣ್ಣಿನಲ್ಲಿ ಹಾಗೇ ಇರುತ್ತದೆ. ಅದ್ದರಿಂದ ಈಗಲೂ ಕೂಡ ಹಣ್ಣನ್ನು ನೆನಸಿಯೇ ತಿನ್ನಬೇಕು.
ಮಾವಿನ ಹಣ್ಣು ಮಾನವದೇಹದಲ್ಲಿ ಇರುವ ಕೊಬ್ಬಿನ ಅಂಶವನ್ನು ಕೂಡ ಕಡಿಮೆ ಮಾಡುತ್ತದೆ. ಹಾಗಾಗಿಯೇ ಅನೇಕ ಜನರು ಮಾವಿನ ಹಣ್ಣುನ್ನು ತಿನ್ನುತ್ತಾರೆ. ಮತ್ತು ದೇಹದ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ, ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯ ವನ್ನು ಸುಧಾರಿಸುತ್ತದೆ.ಮಾವಿನ ಹಣ್ಣನ್ನು ಸೇವಿಸುವ ಮೊದಲು ನೆನಸಿ ನಂತರ ಸ್ವಲ್ಪ ಸಮಯ ಬಿಟ್ಟು ತಿನ್ನಿರಿ. ಅವಾಗ ಮಾವಿನ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು.
