UP: ಹಣಗಳಿಸುವ ಆಸೆಯನ್ನು ಹುಟ್ಟಿಸಿ, ಯುವತಿಯರನ್ನು ಬೆತ್ತಲೆ ಗೊಳಿಸಿ ತಾಂತ್ರಿಕ ಪೂಜೆ ನಡೆಸುತ್ತಿದ್ದ ಅಘಾತಕಾರಿ ಪ್ರಕರಣ ಒಂದು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 14 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.
ಸುಲಭವಾಗಿ ಹಣ ಮಾಡುವ ಉದ್ದೇಶ ಹೊಂದಿರುವವರನ್ನು ಗುರಿಯಾಗಿಸಿಕೊಂಡು ಗ್ಯಾಂಗ್‌ವೊಂದು ಈ ತಾಂತ್ರಿಕ ಪೂಜೆಯನ್ನು ಮಾಡುತ್ತಿದ್ದು, ಹಣ ವಸೂಲಿ ಮಾಡುತ್ತಿದ್ದು ಈ ಪೂಜೆಯ ನೆಪದಲ್ಲಿ 19ರಿಂದ 24 ವರ್ಷದ ಮಹಿಳೆಯರು ಮತ್ತು ಪುರುಷ ರನ್ನು ಅಪಹರಿಸಿ, ಅವರ ಜ್ಞಾನ ತಪ್ಪಿಸಿ ಬೆತ್ತಲೆಗೊಳಿಸಿ ಅವರ ಮೇಲೆ ಹಣವನ್ನು ಸುರಿಯುತ್ತಿದ್ದರು ಎಂಬುದು ತಿಳಿದುಬಂದಿದೆ.
ಅಲ್ಲದೆ, ಮಹಿಳೆಯರ ವಿವಿಧ ಭಂಗಿಯ ಪೋಟೋಗಳನ್ನು ತೆಗೆಯಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಬಂಧನಕ್ಕೊಳಪಟ್ಟಿರುವವರ ಮೊಬೈಲ್‌ಗಳಲ್ಲಿ ಹಲವು ವೀಡಿಯೋ ಗಳು ಪತ್ತೆಯಾಗಿದ್ದು, ಪೂಜೆ ಮಾಡುವ ತಾಂತ್ರಿಕರು ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆ ಮಾಡಿರುವವೀಡಿಯೋ ಗಳು ಇವೆ. ಸದ್ಯ ಈ ಕುರಿತು ಹೆಚ್ಚಿನ ತನಿಖೆ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.
