Home » Gujarath Crime News: 14 ವರ್ಷದ ಹೆಣ್ಣುಮಗಳ ಮೇಲೆಯೇ ತಂದೆಯಿಂದ ನಿರಂತರ ಅತ್ಯಾಚಾರ, ಹೆಣ್ಣು ಮಗುವಿಗೆ ಜನನ

Gujarath Crime News: 14 ವರ್ಷದ ಹೆಣ್ಣುಮಗಳ ಮೇಲೆಯೇ ತಂದೆಯಿಂದ ನಿರಂತರ ಅತ್ಯಾಚಾರ, ಹೆಣ್ಣು ಮಗುವಿಗೆ ಜನನ

0 comments
Rape Case Bhopal

Gujarath Crime News: ನೀಚ ಅಪ್ಪನೋರ್ವ ತನ್ನ 14 ವರ್ಷದ ಮಗಳ ಮೇಲೆಯೇ ನಿರಂತರ ಅತ್ಯಾಚಾರ ಮಾಡಿ ಗರ್ಭವತಿ ಮಾಡಿರುವ ಘಟನೆಯೊಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ. ಫೆ.5 ರಂದು ಈಕೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ವೈದ್ಯರ ಬಳಿ ಆಕೆ ಈ ಘಟನೆಯನ್ನು ಹೇಳಿಕೊಂಡಿದ್ದು, ದಿನಗೂಲಿ ಕಾರ್ಮಿಕನಾಗಿರುವ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

ಮೇ.21, 2010 ರಂದು ಜನಿಸಿದ ಹೆಣ್ಣು ಮಗಳ ಮೇಲೆ ಈತ ಪದೇ ಪದೇ ಅತ್ಯಾಚಾರ ಮಾಡುತ್ತಿದ್ದ. ಆಕೆ ಹೊಟ್ಟೆನೋವಿನಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಸಿವಿಲ್‌ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಆರೋಪಿ ತಂದೆಯ ವಿರುದ್ಧ ಕೇಸು ದಾಖಲು ಮಾಡಿದ್ದಾರೆ. ಆರು ಮಕ್ಕಳನ್ನು ಹೊಂದಿರುವ ಈತ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಜೊತೆಗೆ ಬೆದರಿಕೆ ಕೂಡಾ ಹಾಕಿದ್ದ ಎನ್ನಲಾಗಿದೆ.

You may also like