Dubai: ದುಬೈನಲ್ಲಿ ನಡೆದ ಖಾಸಗಿ ಪಾರ್ಟಿ ಒಂದರಲ್ಲಿ ಭಾಗವಹಿಸಿದ ಉಕ್ರೇನ್ ಮೂಲದ 20ರ ಪ್ರಾಯದ ಮಾಡೆಲ್ ಒಬ್ಬಳು ಕಳೆದ ಹತ್ತು ದಿನಗಳಿಂದಲೂ ನಾಪತ್ತೆಯಾಗಿದ್ದಳು. ಆದರೆ ಅಚ್ಚರಿ ಎಂಬಂತೆ ಇದೀಗ ದುಬೈ ರಸ್ತೆಯಲ್ಲಿ ಆಕೆ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಮಾರ್ಚ್ 9 ರಂದು, ಸಂತ್ರಸ್ತೆ, ತನ್ನ ಸ್ನೇಹಿತರು ಮತ್ತು ಕುಟುಂಬಕ್ಕೆ ದುಬೈನ ಹೋಟೆಲ್‌ನಲ್ಲಿ ನಡೆದ ಕೂಟದಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದ್ದಳು. ಆದರೆ ಪಾರ್ಟಿ ಮುಗಿದ ಬಳಿಕ ಆಕೆಯ ಸುಳಿವೇ ಇರಲಿಲ್ಲ. ಇದರಿಂದ ಅವರೆಲ್ಲರೂ ಆತಂಕಕ್ಕೆ ಒಳಗಾಗಿದ್ದರು. ಆದರೆ ಇದೀಗ ಈ ಮಾಡೆಲ್ ದುಬೈ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಪತ್ತೆಯಾಗಿದ್ದಾಳೆ.
ಸಂತ್ರಸ್ತೆಯ ಸಂಬಂಧಿಕರು ಆಕೆಯನ್ನು ರಸ್ತೆಯ ಬದಿಯಲ್ಲಿ ಬಿಡುವ ಮೊದಲು “ಹಲವಾರು ದಿನಗಳವರೆಗೆ ಅತ್ಯಾಚಾರ ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ. ಅಲ್ಲದೆ ಆಕೆಯ ಕುಟುಂಬವು ದುಬೈನ ಲೈಂಗಿಕ ಪಾರ್ಟಿ”ಯಲ್ಲಿ ಸಿಲುಕಿಕೊಂಡಿರಬಹುದು ಎಂದು ಆರೋಪಿಸಿದೆ.
ಇನ್ನೂ ವರದಿಗಳ ಪ್ರಕಾರ, ಸಂತ್ರಸ್ತೆ ದುಬೈನ ಮಾಡೆಲಿಂಗ್ ಉದ್ಯಮದ ಇಬ್ಬರು ಪುರುಷರೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಅವರೊಂದಿಗೆ ರಾತ್ರಿ ಕಳೆಯಲು ಯೋಜಿಸಿದ್ದರು. ಒಂದು ವಾರದ ನಂತರ ಆಕೆ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾದಾಗ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಯಿತು.
