Home » ಮಾರಕ ಇಂಜೆಕ್ಷನ್‌ ನೀಡಿ 300 ಬೀದಿನಾಯಿಗಳ ಹತ್ಯೆ

ಮಾರಕ ಇಂಜೆಕ್ಷನ್‌ ನೀಡಿ 300 ಬೀದಿನಾಯಿಗಳ ಹತ್ಯೆ

0 comments
Stray Dog

ಹನುಮಕೊಂಡ: ಬೀದಿನಾಯಿಗಳನ್ನು ಇಂಜೆಕ್ಷನ್‌ ನೀಡಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯ ಶಯಂಪೇಟೆ ಮತ್ತು ಅರೆಪಲ್ಲಿ ಗ್ರಾಮದಲ್ಲಿ ನಡೆದಿದೆ. ಒಟ್ಟು 300 ಬೀದಿನಾಯಿಗಳ ಹತ್ಯೆ ಮಾಡಲಾಗಿದೆ. ಈ ಕುರಿತು ಗ್ರಾಮದ ಸರಪಂಚರು ಸೇರಿ 9 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ಮಾರಕ ಚುಚ್ಚುಮದ್ದು ಬಳಸಿ ಸುಮಾರು 300 ಬೀದಿ ನಾಯಿಗಳನ್ನು ಕೊಂದಿದ್ದಾರೆ ಎಂಬ ಆರೋಪವಿದೆ. ಪೊಲೀಸರು, ಪಶುವೈದ್ಯರ ತಂಡ ನಾಯಿಗಳನ್ನು ಹೂಳಲಾದ ಜಾಗಕ್ಕೆ ಬಂದು ಮರಣೋತ್ತರ ಪರೀಕ್ಷೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಕರೀಂನಗರ ಜಿಲ್ಲೆಯ ಎನ್‌ಜಿಒ ಸ್ಟ್ರೇ ಅನಿಮಲ್‌ ಫೌಂಡೇಶನ್‌ ಆಫ್‌ ಇಂಡಿಯಾ ಪರವಾಗಿ ಗೌತಮ್‌ ಶಯಂಪೇಟೆ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಗೌತಮ್‌ ಅವರು ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಇಬ್ಬರು ಸರಪಂಚ್‌ಗಳು ಮತ್ತು ಅವರ ಪತಿಯರು, ಉಪ ಸರಪಂಚ್‌, ಇಬ್ಬರು ಗ್ರಾಮ ಕಾರ್ಯದರ್ಶಿಗಳು ಮತ್ತು ಇಬ್ಬರು ದಿನಗೂಲಿ ಕಾರ್ಮಿಕರ ವಿರುದ್ಧ ಪ್ರಾಣಿಹಿಂಸೆ ತಡೆ ಕಾಯ್ದೆ 1960 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.

You may also like