Home » Fake doctor: ನಕಲಿ ವೈದ್ಯನಿಂದ ಚಿಕಿತ್ಸೆ ಪಡೆದ 6 ತಿಂಗಳ ಮಗು ಸಾವು, ಪೊಲೀಸರಿಂದ ಡಾಕ್ಟರ್‌ನ ಬಂಧನ

Fake doctor: ನಕಲಿ ವೈದ್ಯನಿಂದ ಚಿಕಿತ್ಸೆ ಪಡೆದ 6 ತಿಂಗಳ ಮಗು ಸಾವು, ಪೊಲೀಸರಿಂದ ಡಾಕ್ಟರ್‌ನ ಬಂಧನ

0 comments

Fake doctor: ರಾಮನಗರದಲ್ಲಿ ನಕಲಿ ವೈದ್ಯನಿಂದ ಚಿಕಿತ್ಸೆ ಪಡೆದ 6 ತಿಂಗಳ ಮಗು ಸಾವಿಗೀಡಾಗಿದ್ದು, ಈ ಸಂಬಂಧ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ. ಮಹಮ್ಮದ್ ಸೈಫುಲ್ಲಾ ಬಾಲಗೇರಿಯಲ್ಲಿ ಆಲ್- ಖೈರ್ ಪೌಂಡೇಷನ್‌ ಹೆಸರಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದನು.

ಶಿವರಾಜು ಎಂಬುವವರು ಮಂಗಳವಾರ ಸಂಜೆ 6 ತಿಂಗಳ ಶರಣ್ಯಾಳ ಕಾಲಿನಲ್ಲಿ ಗಂಟು ಇದ್ದ ಕಾರಣಕ್ಕೆ ಸೈಫುಲ್ಲಾನ ಬಳಿ ಹೋಗಿದ್ದರು. ಆತ ಇಂಜೆಕ್ಷನ್ ನೀಡಿದ ಬಳಿಕ ಅಸ್ವಸ್ಥಗೊಂಡಿದ್ದ ಮಗು ಬುಧವಾರ ಸಾವನ್ನಪ್ಪಿತ್ತು. ಹೆಚ್ಚಿನ ಪ್ರಮಾಣದ ಸ್ಟಿರಾಯ್ಡ್ ನೀಡಿದ್ದೇ ಮಗುವಿನ ಸಾವಿಗೆ ಕಾರಣ ಎಂದು ಜಿಲ್ಲಾ ಆಸ್ಪತ್ರೆ ಮೂಲದಿಂದ ಮಾಹಿತಿಯಿದೆ.

You may also like