Home » Bangalore: ಆನ್‌ಲೈನ್‌ ತರಿಸಿದ್ದ ಕೇಕ್‌ ತಿಂದು 6 ರ ಮಗು ಸಾವು? ಪೋಷಕರು ಅಸ್ವಸ್ಥ

Bangalore: ಆನ್‌ಲೈನ್‌ ತರಿಸಿದ್ದ ಕೇಕ್‌ ತಿಂದು 6 ರ ಮಗು ಸಾವು? ಪೋಷಕರು ಅಸ್ವಸ್ಥ

by Mallika
0 comments

Bangalore: ನಗರದ ಕೆಪಿ ಅಗ್ರಹಾರದಲ್ಲಿ ಪೋಷಕರ ತೀವ್ರ ಅಸ್ವಸ್ಥಗೊಂಡಿದ್ದು, ಆರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಂಗಳವಾರ ಸಂಜೆ ಆನ್‌ಲೈನ್‌ನಲ್ಲಿ ತರಿಸಿದ್ದ ಕೇಕ್‌ ತಿಂದಿದ್ದೇ ಈ ಸಾವಿಗೆ ಕಾರಣವಾಯ್ತಾ ಎನ್ನುವ ಶಂಕೆ ವ್ಯಕ್ತವಾಗಿದೆ.

ವಿನಯ್‌ (6 ವರ್ಷ) ಮೃತ ಮಗು. ಕೇಕ್‌ ತಿಂದು ಮಂಗಳವಾರ ತೀವ್ರವಾಗಿ ಅಸ್ವಸ್ಥಗೊಂಡು ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ.

ನಾಲ್ವರು ಈ ಕುಟುಂಬದಲ್ಲಿ ಇದ್ದಿದ್ದು, ಹೆಣ್ಣು ಮಗು ಸಂಬಂಧಿಕರ ಮನೆಗೆ ಹೋಗಿತ್ತು. ಮೂವರು ಮನೆಯಲ್ಲಿದ್ದಿದ್ದು, ಮಂಗಳವಾರ ಸಂಜೆ ಆನ್‌ಲೈನ್‌ನಲ್ಲಿ ಕೇಕ್‌ ತರಿಸಿದ್ದರು. ನಂತರ ಮಗು ಅಸ್ವಸ್ಥಗೊಂಡು, ಬೆಳಿಗ್ಗೆ ಸಾವಿಗೀಡಾಗಿದೆ. ನಂತರ ತಂದೆ, ತಾಯಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಗುವಿನ ಮೃತದೇಹ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಎಫ್‌ಎಸ್‌ಎಲ್‌ಗೆ ರವಾನಿಸಲಿದ್ದಾರೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

You may also like