Home » Belagavi: ನಾಲ್ಕು ವರ್ಷದ ಬಾಲಕಿಯ ಮೇಲೆ 68 ವರ್ಷದ ವೃದ್ಧನಿಂದ ಲೈಂಗಿಕ ದೌರ್ಜನ್ಯ; 20ವರ್ಷ ಜೈಲು!

Belagavi: ನಾಲ್ಕು ವರ್ಷದ ಬಾಲಕಿಯ ಮೇಲೆ 68 ವರ್ಷದ ವೃದ್ಧನಿಂದ ಲೈಂಗಿಕ ದೌರ್ಜನ್ಯ; 20ವರ್ಷ ಜೈಲು!

0 comments
Hyderabad

Belagavi: ನಾಲ್ಕು ವರ್ಷದ ಬಾಲಕಿಗೆ ಚಾಕಲೇಟ್‌ ಆಸೆಯನ್ನು ತೋರಿಸಿ, ಆಕೆಯ ಜೊತೆ ಲೈಂಗಿಕ ದೌರ್ಜನ್ಯ ಮಾಡಿದ ಪ್ರಕರಣಕ್ಕೆ ಕುರಿತಂತೆ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್‌ ಆದೇಶ ಹೊರಡಿಸಿದೆ.

ಕಳೆದ ವರ್ಷ ಫೆ.24 ರಂದು ನಂದಗಡ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಿಸಾರ್‌ ಅಹ್ಮದ್‌ ಫಕ್ರು ಸಾಬ್‌ ಚಾಪ್ಗಾವಿ ಎಂಬ 68 ವರ್ಷದ ವೃದ್ಧ ನಾಲ್ಕು ವರ್ಷದ ಬಾಲಕಿಯನ್ನು ಚಾಕಲೇಟ್‌ ಆಸೆ ಪುಸಲಾಯಿಸಿ ಕರೆದುಕೊಂಡು ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದ.

ಈ ಘಟನೆ ಕುರಿತು ನಿಸಾರ್‌ ಅಹ್ಮದ್‌ ಫಕ್ರು ಸಾಬ್‌ ಚಾಪ್ಗಾವಿ ವಿರುದ್ಧ ನಂದಗಡ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ದೂರು ದಾಖಲಾಗಿತ್ತು.

ಇದೀಗ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿಗಳ ದಂಡ ವಿಧಿಸಿ ತೀರ್ಪು ಪ್ರಕಟ ಮಾಡಿದ್ದಾರೆ.

You may also like