8
Teacher Tortured Student: ವಿದ್ಯಾರ್ಥಿ ಹೋಂ ವರ್ಕ್ ಮಾಡಿಲ್ಲ ಎನ್ನುವ ಕಾರಣಕ್ಕೆ ಆತನ ಕೈ ಕಾಲು ಕಟ್ಟಿ, ತಲೆಕೆಳಗಾಗಿ ನೇತು ಹಾಕಿ ಹಿಂಸೆ ನೀಡಿದ ಘಟನೆ ನಡೆದಿದೆ.
ಹರಿಯಾಣದ ಪಾಣಿಪತ್‌ನ ಶ್ರೀಜನ್ ಪಬ್ಲಿಕ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಹೋಂ ವರ್ಕ್ ಮಾಡಿಲ್ಲ ಎಂದು ಶಿಕ್ಷಕಿಯೊಬ್ಬಳು ಆತನ ಕೈ ಕಾಲು ಕಟ್ಟಿ, ತಲೆಕೆಳಗಾಗಿಸಿ ನೇತು ಹಾಕಿದ್ದು, ಚೆನ್ನಾಗಿ ಥಳಿಸಿದ್ದಾಳೆ.
ಆ.13 ರಂದು ನಡೆದಿದ್ದ ಈ ಘಟನೆಗೆ ಶಾಲಾ ಆಡಳಿತ ಮಂಡಳಿ ಮುಚ್ಚಿಟ್ಟಿದ್ದರು. ಹಲ್ಲೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಬೆಳಕಿಗೆ ಬಂದಿದೆ.
ಪೋಷಕರು ಇದೀಗ ವಿಡಿಯೋ ಆಧರಿಸಿ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡುತ್ತಿದ್ದಂತೆ ಶಿಕ್ಷಕಿ ಕಡೆಯವರು ಎನ್ನಲಾದ ಕೆಲವು ಮಂದಿ ದೂರು ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಾರೆಂದು ವರದಿಯಾಗಿದೆ.
