Home » Deadly Accident; ಅಪಘಾತ ಮಾಡಿ ತಪ್ಪಿಸಿಕೊಳ್ಳುವ ಭರದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದ ಕಾರು- ಇಬ್ಬರ ದಾರುಣ ಸಾವು

Deadly Accident; ಅಪಘಾತ ಮಾಡಿ ತಪ್ಪಿಸಿಕೊಳ್ಳುವ ಭರದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದ ಕಾರು- ಇಬ್ಬರ ದಾರುಣ ಸಾವು

0 comments
Deadly Accident

Deadly Accident: ಕಾರಿಗೆ ಬೈಕ್‌ ಡಿಕ್ಕಿ ಹೊಡೆದು ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಯೊಂದು ಹೊಸಕೋಟೆ-ಚಿಂತಾಮಣಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ. ಬೆಂಗಳೂರಿನ ಶಿವಾಜಿನಗರ ನಿವಾಸಿ ಮೊಹಮ್ಮದ್‌ ಫೈಜ್‌ (18), ಕಣ್ಣೂರಹಳ್ಳಿ ನಿವಾಸಿ ಜಗದೀಶ್‌ (30) ಮೃತಪಟ್ಟ ಬೈಕ್‌ ಸವಾರರು.

ಇದನ್ನೂ ಓದಿ: ಸ್ವಂತ ತಮ್ಮನನ್ನೇ ಗೆಲ್ಲಿಸದ ಡಿಕೆಶಿ ತಮ್ಮ ಸ್ಥಾನ ಉಳಿಸಿಕೊಳ್ತಾರಾ? ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಫಿಕ್ಸಾ ?!

ಅಪಘಾತ ಮಾಡಿ ತಪ್ಪಿಸಿಕೊಳ್ಳಲು ಯತ್ನ ಮಾಡಿ ಕಾರು ಸಮೇತ ಎಸ್ಕೇಪ್‌ ಆಗಲು ಯತ್ನಿಸುವಾಗ, ಪರಾರಿಯಾಗುವ ಧಾವಂತದಲ್ಲಿ ಬೈಕ್‌ಗಳಿಗೆ ಕಾರು ಗುದ್ದಿದ್ದು, ಈ ಸಂದರ್ಭದಲ್ಲಿ ಈ ಭೀಕರ ದುರ್ಘಟನೆ ನಡೆದಿದೆ.

ಅಬ್ಬಾಸ್‌, ಹಬ್ಬಾಸ್‌ ಪಾಷ, ಅಬುಜರ್‌ ಎಂಬುವವರಿಗೆ ಗಾಯವಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.

ಚಾಲಕ ಪ್ರಗತೀಶ್‌ ರಾವ್‌ ಎಂಬಾತ ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಚಲಾಯಿಸಿ, ಅಜಾಗರೂಕತೆಯ ಕಾರು ಚಾಲನೆಯಿಂದ ಇಬ್ಬರ ಪ್ರಾಣ ತೆಗೆದಿರುವ ಆರೋಪವಿದೆ.

ಇದನ್ನೂ ಓದಿ: Valmiki Corporation Scam: ಚುನಾವಣೆ ಫಲಿತಾಂಶದ ನಂತರ ಸಿದ್ದರಾಮಯ್ಯ ಸರಕಾರದ ಮೊದಲ ವಿಕೆಟ್‌ ಪತನ

You may also like

Leave a Comment