Ramnagara: ಇಂದು ಪ್ರೀತಿ-ಪ್ರೇಮಗಳು ಮದುವೆಗೆ ಮುಂಚಿತವಾಗಿಯೇ ದೇಹ ಸಂಪರ್ಕವನ್ನು ನಡೆಸುವ ಮಟ್ಟಕ್ಕೆ ತಲುಪಿದೆ. ಅಂತಯೇ ರಾಮನಗರ ಜಿಲ್ಲೆಯಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದ್ದು ಮದುವೆಗೆ ಮುಂಚಿತವಾಗಿ ಯುವತಿ ಒಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಬೆನ್ನಲ್ಲೇ ಪ್ರಿಯಕರ ಆ ಮಗುವನ್ನು ಮಾರಾಟ ಮಾಡಿದ್ದಾನೆ.
ಹೌದು, ರಾಮನಗರ ಜಿಲ್ಲೆ ಮಾಗಡಿಯ 21 ವರ್ಷದ ಅವಿವಾಹಿತೆ ಫೆಬ್ರವರಿ 20ರಂದು ಕುಣಿಗಲ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಯ ಪ್ರಿಯಕರ ಶ್ರೀನಂದ ಆಸ್ಪತ್ರೆಗೆ ದಾಖಲಿಸಿದ್ದ. ಮದುವೆಯಾಗದ ಹಿನ್ನೆಲೆಯಲ್ಲಿ ಮಗುವನ್ನು ಕರೆದುಕೊಂಡು ಹೋಗಲು ಯುವತಿ ನಿರಾಕರಿಸಿದ್ದಾಳೆ. ಆಗ ಪ್ರಿಯಕರ ಆ ಮಗುವನ್ನು ಬೇರೊಬ್ಬರಿಗೆ ಮಾರಾಟ ಮಾಡಿದ್ದಾನೆ. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಪ್ರಿಯಕರ ಮತ್ತು ಈ ಕೃತ್ಯಕ್ಕೆ ಸಹಕರಿಸಿದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಮುಬಾರಕ್ ಪಾಷಾ ಎಂಬಾತ ಫೆಬ್ರವರಿ 22ರಂದು 60 ಸಾವಿರ ರೂಪಾಯಿ ಕೊಟ್ಟು ಮಗು ಖರೀದಿಸಿದ್ದಾನೆ. ಇದಕ್ಕೆ ಪ್ರಿಯಕರ ಸೇರಿ ಐದು ಮಂದಿ ಸಹಾಯ ಮಾಡಿದ್ದಾರೆ. ಒಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆ ಜ್ಯೋತಿ, ಮಗು ಖರೀದಿಸಿದ ಮುಬಾರಕ್ ಪಾಷಾ, ಮಗುವಿನ ತಾಯಿ ಮತ್ತು ಆಕೆಯ ಪ್ರಿಯಕರ ಈ ಪ್ರಕರಣದ ಆರೋಪಿಗಳಾಗಿದ್ದಾರೆ.
ನಂತರ ಯುವತಿಯ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದು, ಹೆರಿಗೆಯಾಗಿರುವ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾಳೆ. ಈ ವೇಳೆ ಪೋಷಕರು ಮಗು ವಾಪಸ್ ಪಡೆಯಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
