Home » Death News: ಹೊಲಕ್ಕೆ ಬಿದ್ದ ಬೆಂಕಿ ನಂದಿಸಲು ಹೋಗಿ ಮಹಿಳೆ ಆಗ್ನಿಗಾಹುತಿ

Death News: ಹೊಲಕ್ಕೆ ಬಿದ್ದ ಬೆಂಕಿ ನಂದಿಸಲು ಹೋಗಿ ಮಹಿಳೆ ಆಗ್ನಿಗಾಹುತಿ

0 comments
Death News

Death News: ಹೊಲಕ್ಕೆ ಬಿದ್ದ ಬೆಂಕಿ ನಂದಿಸಲು ಹೋದ ಮಹಿಳೆ ಅಗ್ನಿಗಾಹುತಿಯಾಗಿರುವ ಘಟನೆ ಆಲೂರು ತಾಲೂಕಿನ, ಹಾಚಗೋಡನಹಳ್ಳಿ ಗ್ರಾಮದಲ್ಲಿ ಭಾನುವಾರ ತಡ ರಾತ್ರಿ ನಡೆದಿದೆ.

ಇದನ್ನೂ ಓದಿ: Holi Video in Metro: ಹೋಳಿ ನೆಪ; ಮೆಟ್ರೋದಲ್ಲಿ ರೊಮ್ಯಾನ್ಸ್‌ ಮೂಡ್‌ನಲ್ಲಿ ಡ್ಯಾನ್ಸ್‌ ಮಾಡಿದ ಯುವತಿಯರು

ಮೃತ ದುರ್ದೈವಿಯನ್ನು ರತ್ನಮ್ಮ (63) ಎಂದು ಗುರುತಿಸಲಾಗಿದೆ.

ನಿನ್ನೆ ರಾತ್ರಿ ತಮ್ಮ ಜಮೀನಿಗೆ ಬೆಂಕಿ ಬಿದ್ದ ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ರತ್ನಮ್ಮ ಅವರ ಕಣ್ಣೆದುರು ಬೆಳೆ ಹೊತ್ತಿ ಉರಿಯುತ್ತಿತ್ತು. ಅದನ್ನು ಉಳಿಸಿಕೊಳ್ಳಲು

ಇದನ್ನೂ ಓದಿ: Barefoot Workout: ಪ್ರತೀ ದಿನವೂ ಬೆತ್ತಲಾಗಿ ಜೀಮ್ ಮಾಡುತ್ತಾರೆ ಈ ದಂಪತಿ – ಸುಖ ದಾಂಪತ್ಯಕ್ಕೆ ಇದೇ ರೀಸನ್ ಅಂತೆ !!

ಬೆಂಕಿ ನಂದಿಸಲು ಮುಂದಾಗಿದ್ದಾರೆ ಆದರೆ ಅವರಿದ್ದ ಜಾಗಕ್ಕೆ ಬೆಂಕಿಯ ಕೆನ್ನಾಲಿಗೆ ವೇಗವಾಗಿ ಹರಡಿದ್ದರಿಂದ ಅವರು ಅಗ್ನಿಜ್ವಾಲೆಗೆ ಸಿಲುಕಿ ಅಲ್ಲಿಂದ ಹೊರಬರಲಾರದೆ ಬೆಂಕಿ ಹೊತ್ತಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಲೂರು ಆಸ್ಪತ್ರೆಗೆ ರವಾನಿಸಲಾಯಿತು.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಜಮೀನಿಗೆ ಹೊತ್ತಿಕೊಂಡ ಬೆಂಕಿ ಆರಿಸಲು ಹೋಗಿ ಜೀವ ಕಳೆದುಕೊಂಡ ಎರಡನೇ ಪ್ರಕರಣ ಇದಾಗಿದೆ.

You may also like

Leave a Comment