Home » Kasaragod: ಹಿಟಾಚಿ ಮಗುಚಿ ಬಿದ್ದು ಯುವಕ ದಾರುಣ ಸಾವು

Kasaragod: ಹಿಟಾಚಿ ಮಗುಚಿ ಬಿದ್ದು ಯುವಕ ದಾರುಣ ಸಾವು

0 comments
Kasaragod

Kasaragod: ಯುವಕನೋರ್ವ ಜೆಸಿಬಿ ಯಂತ್ರ ಮಗುಚಿ ಬಿದ್ದು ಮೃತಪಟ್ಟ ಘಟನೆಯೊಂದು ಬಂದಡ್ಕದಲ್ಲಿ ನಡೆದಿದೆ.

Power TV: ತಕ್ಷಣದಿಂದಲೇ ಪವರ್‌ ಟಿವಿ ಪ್ರಸಾರ ಸ್ಥಗಿತಕ್ಕೆ ಹೈಕೋರ್ಟ್‌ ಆದೇಶ, ಸೌಜನ್ಯಾ ಹೋರಾಟಗಾರರಿಗೆ ಮತ್ತೊಂದು ಜಯ

ಬಂದಡ್ಕದ ಪ್ರೀತಂ ಲಾಲ್‌ ಚಂದ್‌ (22) ಎಂಬಾತನೇ ಮೃತ ಯುವಕ. ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಮಿನಿಚಂದನ್‌ ಅವರ ಪುತ್ರನೇ ಲಾಲ್‌ ಚಂದ್‌. ಇವರಿಗೆ ಸೇರಿರುವ ಜೆಸಿಬಿ ಯಂತ್ರ ತೊಳೆಯುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಸಂಬಂಧಿಕರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಬಂದಡ್ಕದ ಪಡುಪ್ಪುನಲ್ಲಿರುವ ಮನೆಯಂಗಳದಲ್ಲಿ ಹಿಟಾಚಿ ತೊಳೆಯುತ್ತಿದ್ದಾಗ ಮಗುಚಿ ಬಿದ್ದಿದೆ. ಲಾಲ್‌ಚಂದ್‌ ಅದರಲ್ಲಿ ಸಿಲುಕಿದ್ದು, ನಂತರ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲು ಮಾಡಿದರೂ ಜೀವ ಉಳಿಸಲಾಗಿಲ್ಲ.

ಜೆಸಿಬಿ ಯಂತ್ರದಲ್ಲಿ ಸಹಾಯಕನಾಗಿ ಸಹೋದರ ಗೌತಮ್‌ಲಾಲ್‌ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ. ಈ ಘಟನೆ ಕುರಿತು ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಾಗಿದೆ.

Gruhalakshmi Scheme: ಇನ್ಮುಂದೆ ಈ ದಿನಾಂಕದಂದು ಕರೆಕ್ಟ್ ಆಗಿ ಖಾತೆಗೆ ಜಮಾ ಆಗುತ್ತೆ ಗೃಹಲಕ್ಷ್ಮೀ ದುಡ್ಡು !!

You may also like

Leave a Comment