Home » Actor Darshan: ದರ್ಶನ್‌ ಜಾಮೀನು ಅರ್ಜಿ ನಾಳೆ ವಿಚಾರಣೆ, ಅ.14 ಕ್ಕೆ ಪವಿತ್ರಾ ಅರ್ಜಿ ವಿಚಾರಣೆ

Actor Darshan: ದರ್ಶನ್‌ ಜಾಮೀನು ಅರ್ಜಿ ನಾಳೆ ವಿಚಾರಣೆ, ಅ.14 ಕ್ಕೆ ಪವಿತ್ರಾ ಅರ್ಜಿ ವಿಚಾರಣೆ

2 comments

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆ (ಅ.10) ಕ್ಕೆ ಮುಂದೂಡಲಾಗಿದ್ದು, ಪವಿತ್ರಾ ಗೌಡ ಅರ್ಜಿ ಸೇರಿ ಇತರೆ ಐದು ಆರೋಪಿಗಳ ಜಾಮೀನು ಅರ್ಜಿ ಆದೇಶವನ್ನು ಅ.14 ರಂದು ಪ್ರಕಟ ಮಾಡುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ.

ಅ.09 ರಂದು ವಾದ ಮಂಡಿಸಿದ ಪ್ರಸನ್ನ ಕುಮಾರ್‌ ಅವರು, ನಟ ದರ್ಶನ್‌ ಮನೆಯಿಂದ ವಶಪಡಿಸಿಕೊಂಡ ವಸ್ತುಗಳು, ರಕ್ತದ ಕಲೆ, ಸಾಕ್ಷ್ಯಗಳ ಹೇಳಿಕೆ ದಾಖಲಿಸಲು ವಿಳಂಬ ಆಗಿದ್ದಕ್ಕೆ ಕಾರಣ, ಎಫ್‌ಎಸ್‌ಎಲ್‌ ವರದಿಗಳು, ಅವುಗಳ ಸತ್ಯಾಸತ್ಯತೆ ಬಗ್ಗೆ ಎತ್ತಲಾಗಿದ್ದ ಅನುಮಾನಗಳಿಗೆ ಉತ್ತರ ನೀಡಿದರು. ಅಷ್ಟೇ ಅಲ್ಲದೇ ಈ ಪ್ರಕರಣದಲ್ಲಿ ಎ13 ಆಗಿರುವ ದೀಪಕ್‌ಗೆ ಜಾಮೀನು ನೀಡಬಹುದು ಆತನ ಮೇಲೆ ಕೊಲೆ ಆರೋಪ, ಅಪಹರಣ ಆರೋಪ ಇಲ್ಲ. ಸಾಕ್ಷ್ಯ ನಾಶದ ಆರೋಪ ಇದೆ. ಇದು ಜಾಮೀನು ನೀಡಬಹುದಾದ ಆರೋಪ ಎಂದು ಹೇಳಿದರು.

ಎ1 ಪವಿತ್ರಾ ಗೌಡ, ಎ2 ದರ್ಶನ್‌, ಎ8, ಎ11, ಎ12 ಇವರುಗಳು ಅಪಹರಣ ಹಾಗೂ ಕೊಲೆಯಲ್ಲಿ ಶಾಮೀಲಾಗಿರುವ ಕಾರಣ ಜಾಮೀನು ನೀಡಬಾರದು, ಎ 8 ಆರೋಪಿ ಕಾರು ಚಾಲಕ ರವಿಶಂಕರ್‌ ಬಟ್ಟೆಯ ಮೇಲೆ ರಕ್ತದ ಕಲೆ ಇರುವ ಕಾರಣ ಆತನಿಗೆ ಜಾಮೀನು ನೀಡಬಾರದು ಎಂದು ಹೇಳಿದರು.

ಎ1 ಪವಿತ್ರಾ, ಎ8,ಎ11,ಎ12,ಎ13 ಅವರುಗಳ ಜಾಮೀನು ಅರ್ಜಿಯ ಕುರಿತ ಆದೇಶವನ್ನು ಅ.14 ರಂದು ಪ್ರಕಟಿಸುವುದಾಗಿ ನ್ಯಾಯಾಧೀಶರು ಹೇಳಿದರು.

You may also like

Leave a Comment