Home » Actor Darshan: ರೇಣುಕಾ ಸ್ವಾಮಿ ಶವ ಸಾಗಿಸಲು ಬಳಸಿದ್ದ ಕಾರು ವಶ

Actor Darshan: ರೇಣುಕಾ ಸ್ವಾಮಿ ಶವ ಸಾಗಿಸಲು ಬಳಸಿದ್ದ ಕಾರು ವಶ

0 comments
Actor Darshan

Renuka Swamy: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಇದೀಗ ತಮ್ಮ ಅಪರಾಧಕ್ಕೆ ಬಳಕೆ ಮಾಡಲಾಗಿದೆ ಎನ್ನಲಾಗಿರುವ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Sridevi Byrappa: ಯುವ ರಾಜ್‌ಕುಮಾರ್‌ ಆಸ್ತಿ ಹಣ ಬೇಡ- ಶ್ರೀದೇವಿ ಲಾಯರ್‌

ಸಿಸಿಟಿವಿ ದೃಶ್ಯಾವಳಿಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ, ಜೀಪ್‌ ರ್ವಾಂಗ್ಲರ್‌ ಕಾರು ರೇಣುಕಾಸ್ವಾಮಿಯನ್ನುಕೂಡಿ ಹಾಕಿದ್ದ ರಾಜರಾಜೇಶ್ವರಿ ನಗರದ ಶೆಡ್‌ಗೆ ಹೋಗುತ್ತಿರುವ ದೃಶ್ಯ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದೀಗ ಈ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೂ ಕಾರಿನಲ್ಲಿದ್ದ ಕೆಲವು ವಸ್ತುಗಳನ್ನು ಕೂಡಾ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಮದ್ಯದ ಬಾಟಲಿ, ಮಹಿಳೆಯರು ಬಳಸುವ ವ್ಯಾನಿಟಿ ಬ್ಯಾಗ್‌ ನ್ನು ಪೊಲೀಸರು ವಶಪಡಿಸಿಕೊಂಡ ವಾಹನದಿಂದ ಜಪ್ತಿ ಮಾಡಿದ್ದಾರೆ.

ವ್ಯಾನಿಟಿ ಬ್ಯಾಗು ಪವಿತ್ರದ್ದು ಎನ್ನಲಾಗಿದೆ. ಜೀಪ್‌ ಕಾರು ದರ್ಶನ್‌ ಆಪ್ತ ವಿನಯ್‌ ಹೆಸರಿನಲ್ಲಿ ನೋಂದಣಿ ಆಗಿದೆ. ದರ್ಶನ್‌ ಅವರು ಬೆಂಗಳೂರಿನಲ್ಲಿ ಓಡಾಡಲು ಈ ಕಾರನ್ನೇ ಬಳಸುತ್ತಿದ್ದರು. ಹಾಗೂ ಕೊಲೆ ನಡೆದ ರಾತ್ರಿ ಕೂಡಾ ಈ ಕಾರಿನಲ್ಲೇ ಶೆಡ್‌ಗೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಇನ್ನೊಂದು ಸ್ಕಾರ್ಪಿಯೋ ಕಾರು ದರ್ಶನ್‌ನ ಆಪ್ತ ಪ್ರದೋಶ್‌ ಹೆಸರಿನಲ್ಲಿದೆ. ಈ ಕಾರಿನಲ್ಲಿಯೇ ಆರೋಪಿಗಳು ರೇಣುಕಾ ಸ್ವಾಮಿಯ ಶವವನ್ನು ಕೊಂಡೊಯ್ದು ಸುಮನಹಳ್ಳಿ ಮೋರಿಗೆ ಎಸೆದಿದ್ದರು ಎನ್ನಲಾಗಿದೆ.

ಇದೇ ಸ್ಕಾರ್ಪಿಯೋ ಕಾರಿನಿಂದ ವ್ಯಾನಿಟಿ ಬ್ಯಾಗ್‌ ದೊರಕಿದೆ. ಎರಡೂ ಕಾರುಗಳು ಪಶ್ಚಿಮ ವಿಭಾಗದ ಡಿಸಿಪಿ ಕಚೇರಿ ಬಳಿ ಇದ್ದು, ಬೆರಳಚ್ಚು ತಜ್ಞರು ಕಾರಿನಲ್ಲಿ ಬೆರಳಚ್ಚುಗಳ ಪ್ರತಿಯನ್ನು ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಆಂಧ್ರಕ್ಕೆ ಹೊಸ ರಾಜಧಾನಿ ಘೋಷಿಸಿದ ಚಂದ್ರಬಾಬು ನಾಯ್ಡು

You may also like

Leave a Comment