Home » Actor Darshan Case: ದರ್ಶನ್‌ ಮನೆಯಲ್ಲಿದ್ದ ಮೂರು ಬೈಕ್‌ಗಳು ಜಪ್ತಿ

Actor Darshan Case: ದರ್ಶನ್‌ ಮನೆಯಲ್ಲಿದ್ದ ಮೂರು ಬೈಕ್‌ಗಳು ಜಪ್ತಿ

0 comments
Renuka Swamy Murder Case

Actor Darshan Case: ರೇಣುಕಾಸ್ವಾಮಿ ಕೊಲೆ ಕೃತ್ಯಕ್ಕೆ ಬಳಸಿದ್ದ ನಟ ದರ್ಶನ್‌ ಮನೆ ಆವರಣದಲ್ಲಿ ನಿಲ್ಲಿಸಲಾಗಿದ್ದ ಅವರ ಸಹಚರರ ಮೂರು ಸ್ಕೂಟರ್‌ಗಳನ್ನು ಪೊಲೀಸರು ಮಂಗಳವಾರ ಜಪ್ತಿ ಮಾಡಲಾಗಿದೆ.

ತನ್ನ ಮದುವೆಯಲ್ಲಿ ಡ್ಯಾನ್ಸ್‌ ಮಾಡುತ್ತಿರುವಾಗಲೇ ಕುಸಿದು ಸಾವು ಕಂಡ ವಧು

ರಾಜರಾಜೇಶ್ವರಿ ನಗರದ ಐಡಿಯಲ್‌ ಹೋಮ್ಸ್‌ ಲೇಔಟ್‌ನಲ್ಲಿರುವ ದರ್ಶನ್‌ರವರ ಮನೆಗೆ ಕೊಲೆ ಪ್ರಕರಣ ಕುರಿತು ಮಹಜರು ಮಾಡಲು ದರ್ಶನ್‌ ಸಹಚರರಾದ ನಂದೀಶ್‌, ಪವನ್‌, ಧನರಾಜ್‌ ಅಲಿಯಾಸ್‌ ರಾಜುನನ್ನು ಪೊಲೀಸರು ಕರೆತಂದಿದ್ದು, ಈ ಸಂದರ್ಭದಲ್ಲಿ ಮೂರು ಗಾಡಿಗಳನ್ನು ವಶಪಡಿಸಲಾಗಿದೆ.

ಮೂರು ತಾಸು ಮಹಜರು ನಡೆಸಿದ ಬಳಿಕ ದರ್ಶನ್‌ರವರ ಮನೆ ಆವರಣದಲ್ಲಿದ್ದ ಆಕ್ಸಿಸ್‌, ಹೋಂಡಾ ಆಕ್ಟೀವಾ, ಸೇರಿ ಮೂರು ಸ್ಕೂಟರುಗಳನ್ನು ಟಾಟಾ ಏಸ್‌ ಆಟೋದಲ್ಲಿ ತುಂಬಿಸಿಕೊಂಡು ಪೊಲೀಸರು ತೆರಳಿದ್ದಾರೆ.

ಶೆಡ್‌ಗೆ ಊಟ, ಕೃತ್ಯ ನಡೆದ ನಂತರ ಹೊಸಬಟ್ಟೆ, ವಿದ್ಯುತ್‌ ಶಾಕ್‌ ನೀಡಲು ಮೆಗ್ಗರ್‌ ಸಾಧನ ತರಲು ಸೇರಿದಂತೆ ಇತರೆ ಕೆಲಸಕ್ಕೆ ಈ ವಾಹನಗಳಲ್ಲಿ ಆರೋಪಿಗಳು ಓಡಾಡಿದ್ದರು. ಈ ಮೇರೆಗೆ ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.

Cleaning Tips: ಬಿಳಿ ಬಟ್ಟೆ ಮೇಲಿನ ಕಲೆ ತೆಗಿಯೋಕೆ ಇಲ್ಲಿದೆ ಸುಲಭ ಉಪಾಯ!

You may also like

Leave a Comment