Home » ಬದುಕಿದ್ದವರಿಗೆ ಮರಣಪತ್ರ ನೀಡಿದ ಆಡಳಿತಾಧಿಕಾರಿ ಅಮಾನತು

ಬದುಕಿದ್ದವರಿಗೆ ಮರಣಪತ್ರ ನೀಡಿದ ಆಡಳಿತಾಧಿಕಾರಿ ಅಮಾನತು

0 comments

ಬೆಳಗಾವಿ ಸವದತ್ತಿ ತಾಲೂಕಿನ ಸುತಗಟ್ಟಿ ಗ್ರಾಮದ ಜೀವಂತ ರೈತರೊಬ್ಬರಿಗೆ ಮರಣ ಪ್ರಮಾಣಪತ್ರ ನೀಡಿ, ಕರ್ತವ್ಯ ಲೋಪ ಎಸಗಿದ್ದ ಗ್ರಾಮ ಆಡಳಿತಾಧಿಕಾರಿ ನೀಲಾ ಮುರಗೋಡ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶಿಸಿದ್ದಾರೆ.

2021ರಲ್ಲಿ ಸುತಗಟ್ಟಿ ನಿವಾಸಿ ಮೃತ ಬಸವರಾಜ ಈರಪ್ಪ ಅಬ್ಬಾಯಿ ಬದಲಿಗೆ, ಅವರ ತಂದೆ ಈರಪ್ಪ ನಾಗಪ್ಪ ಅಬ್ಬಾಯಿ ಜೀವಂತವಾಗಿದ್ದರೂ ಅವರ ಹೆಸರಿನಲ್ಲಿ ಮರಣ ನೋಂದಣಿ ಮಾಡಲಾಗಿತ್ತು. ನಂತರ ಸರಿಪಡಿಸಿ, ಮೃತ ಬಸವರಾಜ ಹೆಸರಲ್ಲಿ, ಮರಣ ನೋಂದಣಿ ಮಾಡಿ ಪ್ರಮಾಣಪತ್ರ ವಿತರಿಸಲಾಗಿತ್ತು.

ಆದರೆ, ಈ ಮೊದಲು ಈರಪ್ಪ ಅಬ್ಬಾಯಿ ಅವರ ಪ್ರಮಾಣ ಪತ್ರದ ವಿಚಾರವಾಗಿ ತಿದ್ದುಪಡಿ ಮಾಡದೆ, ಮುಖ್ಯ ಕಚೇರಿಗೂ ಮಾಹಿತಿ ನೀಡದೇ ಕರ್ತವ್ಯಲೋಪ ಎಸಗಿದ್ದು ಕಂಡು ಬ೦ದಿದೆ. ಈ ಹಿನ್ನಲೆಯಲ್ಲಿ ಇಲಾಖಾ ತನಿಖೆ ಬಾಕಿ ಉಳಿಸಿಕೊಂಡು ಅಮಾನತುಗೊಳಿಸಿರುವುದಾಗಿ ಡಿಸಿ ಆದೇಶದಲ್ಲಿ ತಿಳಿಸಿದ್ದಾರೆ.

 

You may also like