Home » Mysore : ಮಂಗಳೂರು ಬಳಿಕ ಮೈಸೂರಲ್ಲಿ ಹರಿದ ನೆತ್ತರು.!! ಮಚ್ಚೆನಿಂದ ಕೊಚ್ಚಿ ರೌಡಿಶೀಟರ್ ನ ಬರ್ಬರ ಕೊಲೆ!!

Mysore : ಮಂಗಳೂರು ಬಳಿಕ ಮೈಸೂರಲ್ಲಿ ಹರಿದ ನೆತ್ತರು.!! ಮಚ್ಚೆನಿಂದ ಕೊಚ್ಚಿ ರೌಡಿಶೀಟರ್ ನ ಬರ್ಬರ ಕೊಲೆ!!

0 comments

Mysore : ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಹಾಗೂ ರೌಡಿಶೀಟರ್ ಸುಹಾಸ್ ಶೆಟ್ಟಿ ಹtyeyae ಪ್ರಕರಣ ಮಾಸುವ ಮುನ್ನವೇ ಇದೀಗ ಮೈಸೂರಿನಲ್ಲಿಯೂ ಕೂಡ ನೆತ್ತರು ಹರಿದಿದೆ.

ಮೈಸೂರು ಜಿಲ್ಲೆಯ ವರುಣಾ ಗ್ರಾಮದ ಬಳಿಯ ಹೊಟೆಲ್‌ ಒಂದರ ಮುಂಭಾಗದಲ್ಲಿ ಭಾನುವಾರ ತಡರಾತ್ರಿ ರೌಡಿಶೀಟರ್‌ ಕಾರ್ತಿಕ್‌ (33) ಎಂಬಾತನನ್ನು ದುಷ್ಕರ್ಮಿಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಅಂದಹಾಗೆ ಕಾರ್ತಿಕ್‌ ಕ್ಯಾತಮಾರನಹಳ್ಳಿ ನಿವಾಸಿ. ಆತನ ಕೊಲೆಗೆ ಹಳೆ ವೈಷಮ್ಯವೇ ಕಾರಣ ಎನ್ನಲಾಗಿದೆ. ಕಾರ್ತಿಕ್‌ನನ್ನು ಪ್ರವೀಣ್‌ ಎಂಬಾತ ಹಳೆ ದ್ವೇಷದಿಂದ ಕೊಲೆ ಮಾಡಿದ್ದಾನೆ. ಈ ಇಬ್ಬರ ನಡುವೆ ಹಿಂದೆ ಲಕ್ಷ್ಮಿ ಎಂಬ ಯುವತಿಯ ವಿಚಾರಕ್ಕೆ ಗಲಾಟೆ ನಡೆದಿತ್ತು. ಆ ಘಟನೆಯ ಬಳಿ ಪ್ರವೀಣ್‌ ನಾಪತ್ತೆಯಾಗಿದ್ದ. ಇತ್ತೀಚೆಗೆ ಇಬ್ಬರ ನಡುವೆ ರಾಜಿಗಾಗಿ ಪ್ರವೀಣ್‌ ಕಾರ್ತಿಕ್‌ನನ್ನು ಮಾತನಾಡಲು ಕರೆಸಿ, ಕೊಲೆ ಮಾಡಿಸಿದ್ದಾನೆ ಎಂದು ಕಾರ್ತಿಕ್‌ನ ಸಂಬಂಧಿ ಪದ್ಮನಾಭ್‌ ಆರೋಪಿಸಿದ್ದಾರೆ.

ಕಾರ್ತಿಕ್ ಮಲಗಿದ್ದ ವೇಳೆ ಪ್ರವೀಣ್‌ ಹಾಗೂ ಇತರರು ಆತನನ್ನು ಮಾತನಾಡಲು ಕರೆದಿದ್ದಾರೆ. ರಾಜಿಯ ನೆಪದಲ್ಲಿ ಬಂದು ಗುಂಪು ಕಾರ್ತಿಕ್‌ನ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

You may also like