7
Bangalore: ರಾಜ್ಯದಲ್ಲಿ ಮತ್ತೊಂದು ʼಬ್ಯಾಂಕ್ ದರೋಡೆʼ ಗೆ ಯತ್ನ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಲಾಕರ್ ಒಡೆದು ಹಣ ಲೂಟಿ ಮಾಡಲು ಯತ್ನ ಮಾಡಿದ್ದಾರೆ ದುಷ್ಕರ್ಮಿಗಳು.
ಮಂಡ್ಯ ಜಿಲ್ಲೆಯ ನಾಗಮಂಡಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಬ್ಯಾಂಕ್ ಆಫ್ ಬರೋಡ ಬ್ಯಾಂಕ್‌ನ ಕಿಟಕಿ ಕತ್ತರಿಸಿ ಒಳಗೆ ನುಗ್ಗಿ ಬ್ಯಾಂಕ್ ಒಳಭಾಗದಲ್ಲಿರುವ ಲಾಕರನ್ನು ಒಡೆಯಲು ಯತ್ನ ಮಾಡಿದ್ದಾರೆ.
ಆದರೆ ಲಾಕರ್ ಒಡೆಯಲು ಸಾಧ್ಯವಾಗದೇ ಕಳ್ಳರು ಬರಿಗೈಯಲ್ಲಿ ವಾಪಸ್ ಆಗಿದ್ದಾರೆ. ಸ್ಥಳಕ್ಕೆ ನಾಗಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
