Panaji: ಗೋವಾದ ಹೋಟೆಲ್‌ನಲ್ಲಿ ಕಳೆದ ವರ್ಷ ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ಬೆಂಗಳೂರು ಮೂಲದ ಟೆಕ್ ಕನ್ಸಲ್ಟೆನ್ಸಿಯ ಸಿಇಓ ಸುಚನಾ ಸೇಠ್ ಜೈಲಿನಲ್ಲಿ ಕಿರಿಕ್ ಮಾಡಿದ್ದು, ಈಕೆಯ ಮೇಲೆ ಇನ್ನೊಂದು ಕೇಸ್ ಬಿದ್ದಿದೆ.
ಬಿಎನ್‌ಎಸ್ ಸೆಕ್ಷನ್ 121 (1), ಮತ್ತು 352 ಅಡಿಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಮಂಗಳವಾರ ಗೋವಾದ ಕೇಂದ್ರ ಕಾರಾಗೃಹದಲ್ಲಿ ಕಾನ್‌ಸ್ಟೇಬಲ್ ಮೇಲೆ ಹಲ್ಲೆ ಮಾಡಿದ ಆರೋಪ ಈಕೆಯ ಮೇಲಿದೆ.
ಸೋಮವಾರ ಕೊಲ್ವಾಲೆಯ ಕೇಂದ್ರ ಕಾರಾಗೃಹದಲ್ಲಿರುವ ಮಹಿಳಾ ಬ್ಲಾಕ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಮಹಿಳಾ ಕೈದಿ ಬ್ಲಾಕ್‌ನ ಒಳಗಿನ ರಿಜಿಸ್ಟರನ್ನು ಪೊಲೀಸ್ ಕಾನ್‌ಸ್ಟೇಬಲ್‌ನಿಂದ ಅನುಮತಿಯಿಲ್ಲದೆ ಪಡೆದಿದ್ದು, ಪ್ರಶ್ನೆ ಮಾಡಿದ್ದಕ್ಕೆ ದೂರುದಾರರನ್ನು ಅಸಭ್ಯವಾಗಿ ನಿಂದಿಸಿ, ಹೊಡೆದು, ತಳ್ಳಿ, ಕೂದಲನ್ನು ಎಳೆದಾಡಿ ದೈಹಿಕ ಹಲ್ಲೆ ಮಾಡಿರುವ ಕುರಿತು ಆರೋಪವಿದೆ.
