Home » Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಮತ್ತೊಂದು ಸಂಚು ಬಯಲು; ನಾಲ್ವರ ಬಂಧನ

Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಮತ್ತೊಂದು ಸಂಚು ಬಯಲು; ನಾಲ್ವರ ಬಂಧನ

0 comments
Salman Khan

Salman Khan: ಸಲ್ಮಾನ್ ಖಾನ್ ಹತ್ಯೆಗೆ ಯತ್ನಿಸಿದ ಮತ್ತೊಂದು ಸಂಚನ್ನು ಪೊಲೀಸರು ವಿಫಲಗೊಳಿಸಿರುವ ಘಟನೆಯೊಂದು ನಡೆದಿದೆ. ಈ ಪ್ರಕರಣದಲ್ಲಿ ನವಿ ಮುಂಬೈನ ಪನ್ವೇಲ್ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಈ ವ್ಯಕ್ತಿಗಳು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನವರು ಮತ್ತು ಅವರು ಪನ್ವೆಲ್‌ನಲ್ಲಿ ಸಲ್ಮಾನ್ ಖಾನ್ ಅವರ ಕಾರಿನ ಮೇಲೆ ದಾಳಿ ಮಾಡಲು ಯೋಜಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಮೂಲಗಳ ಪ್ರಕಾರ, ಇದಕ್ಕಾಗಿ ಪಾಕಿಸ್ತಾನದ ಶಸ್ತ್ರಾಸ್ತ್ರ ಪೂರೈಕೆದಾರರಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಯೋಜನೆ ಇತ್ತು. ನವಿ ಮುಂಬೈ ಪೊಲೀಸರು ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ಅವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Bengaluru: ಅತ್ತ ಪ್ರಜ್ವಲ್ ರೇವಣ್ಣ ಎಸ್ ಐಟಿ ವಶಕ್ಕೆ; ಇತ್ತ ವಿಹಾರಕ್ಕೆ ತೆರಳಿದ ಕುಮಾರಸ್ವಾಮಿ ಕುಟುಂಬ

ಪೊಲೀಸ್ ಮೂಲಗಳ ಪ್ರಕಾರ, ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರು ಕೆನಡಾ ಮೂಲದ ಅನ್ಮೋಲ್ ಬಿಷ್ಣೋಯ್ ಮತ್ತು ಸಹವರ್ತಿ ಗೋಲ್ಡಿ ಬ್ರಾರ್ ಅವರೊಂದಿಗೆ ಶಸ್ತ್ರಾಸ್ತ್ರ ವ್ಯಾಪಾರಿಯಿಂದ AK-47, M-16 ಮತ್ತು AK-92 ಸೇರಿದಂತೆ ಮದ್ದುಗುಂಡುಗಳನ್ನು ಖರೀದಿಸಿದ್ದಾರೆ ಎಂದು ಪೊಲೀಸರು ಮಾಹಿತಿ ಪಡೆದಿದ್ದಾರೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸಿ ನಟ ಸಲ್ಮಾನ್ ಖಾನ್ ಹತ್ಯೆಗೆ ಪಾಕಿಸ್ತಾನ ಸಂಚು ರೂಪಿಸಿದೆ.

ಇದನ್ನೂ ಓದಿ: Pune Porsche Accident Case: ಪುಣೆ ಅಪಘಾತ ಪ್ರಕರಣ; ಇಬ್ಬರ ಕೊಂದ ಅಪ್ರಾಪ್ತ ಆರೋಪಿಯ ರಕ್ತದ ಮಾದರಿಯನ್ನು ಬದಲಾಯಿಸಿ, ತನ್ನ ರಕ್ತದ ಮಾದರಿ ನೀಡಿದ ತಾಯಿ ಅರೆಸ್ಟ್‌

ಮಾಹಿತಿ ಪ್ರಕಾರ ಬಂಧಿತ ಕ್ರಿಮಿನಲ್ ಗಳು ಹಾಗೂ ಗ್ಯಾಂಗ್ ಸೇರಿ ಪ್ಲಾನ್ ಸಿದ್ಧಪಡಿಸಿದ್ದರು. ಇದರಲ್ಲಿ ಸಲ್ಮಾನ್ ಖಾನ್ ಅವರ ಕಾರನ್ನು ನಿಲ್ಲಿಸುವುದು ಅಥವಾ ಫಾರ್ಮ್ ಹೌಸ್ ಮೇಲೆ ದಾಳಿ ಮಾಡುವುದು ಅವರ ಉದ್ದೇಶವಾಗಿತ್ತು.

You may also like

Leave a Comment