3
Mangalore: ನಗರ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ಶುಕ್ರವಾರ ಮುಂಜಾನೆ ನೌಷಾದ್ ಎಂಬಾತನಿಗೆ ಚೂರಿಯಿಂದ ಇರಿದ ಘಟನೆ ವರದಿಯಾಗಿದೆ.
ಮುಂಜಾನೆ 3 ಗಂಟೆಗೆ ಅಡ್ಯಾರು ಕಣ್ಣೂರು ಹೆದ್ದಾರಿಯಲ್ಲಿ ನಿಂತಿದ್ದ ಸಂದರ್ಭ ಎರಡು ದ್ವಿಚಕ್ರ ವಾಹನದಲ್ಲಿ ಬಂದ ನಾಲ್ವರು ನೌಷಾದ್‌ನ ಬೆನ್ನಿಗೆ ಚೂರಿ ಇರಿದಿದ್ದಾರೆ ಎಂದು ವರದಿಯಾಗಿದೆ. ಕೂಡಲೇ ನೌಷಾದ್ ಓಡಿಹೋಗಿ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ.
ಇಂದು ಮುಂಜಾನೆ ಕಲ್ಲಾಪು ಮಾರುಕಟ್ಟೆಗೆ ಬರುತ್ತಿದ್ದ ಉಳ್ಳಾಲದ ಅಳೇ ಕಲ ನಿವಾಸಿ ಎಂ ಒಳಪೇಟೆ ಬಳಿ ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡವೊಂದು ತಲವಾರು ಬೀಸಿ ಕೊಲೆಗೆ ಯತ್ನಿಸಿತ್ತೆನ್ನಲಾಗಿದೆ. ಆದರೆ ಗಂಭೀರ ಗಾಯಗೊಂಡರೂ ತಪ್ಪಿಸಿಕೊಂಡ ಇವರನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳೀಯರು ನಗರದ ಖಾಸಗಿ ಆಸ್ಪತ್ರೆ ಯುನಿಟಿಗೆ ದಾಖಲು ಮಾಡಿದ್ದಾರೆ ಎಂದು ವರದಿಯಾಗಿದೆ.
