4
ಕಲಬುರಗಿ: ನಗರದ ಹೊರ ವಲಯದ ಕೇಂದ್ರ ಕಾರಾಗೃಹದಲ್ಲಿ ಬೀಡಿ ಎಸೆಯಲು ಬಂದ ಮೂವರು ಆರೋಪಿಗಳನ್ನು ಅಲ್ಲಿನ ಭದ್ರತಾ ಸಿಬ್ಬಂದಿ ಹಿಡಿದು, ಫರತಾಬಾದ್ ಪೊಲೀಸರಿಗೆ ಒಪ್ಪಿಸಿದರು.
ಬಸವನಗರದ ಪಿಂಟು, ವಿಜಯಕುಮಾರ ಹವಳಪ್ಪ, ವಡ್ಡರ್ ಗಲ್ಲಿಯ ಅನಿಲ ಜಾಧವ್ ಬಂಧಿತರು. ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾರಾಗೃಹ ಹೊರವಲಯದಲ್ಲಿ ಬಾಲ್ ಆಕಾರದ ವಸ್ತುವಿನ ಮೂಲಕ ನಿಷೇಧಿತ ವಸ್ತುಗಳನ್ನು ಎಸೆಯಲು ಯತ್ನಿಸುತ್ತಿದ್ದಾಗ ಭದ್ರತಾ ಸಿಬ್ಬಂದಿಗೆ ಸೆರೆಯಾಗಿದ್ದಾರೆ.
