Home » ಯುವತಿ ತಬ್ಬಿದ ಕಾಮುಕ ಅರೆಸ್ಟ್

ಯುವತಿ ತಬ್ಬಿದ ಕಾಮುಕ ಅರೆಸ್ಟ್

0 comments
Crime News Bangalore

Crime: ಕೆಲದಿನಗಳ ಹಿಂದೆ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ಆರೋಪಿಯನ್ನು ಮಾರತ್ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೇವರಬೀಸನಹಳ್ಳಿ ನಿವಾಸಿ ಶ್ರೀಕಾಂತ್ (32) ಬಂಧಿತ.

ಏ.30ರಂದು ರಾತ್ರಿ ನಗರದ ಸಾಫ್ಟ್‌ವೇರ್ ಕಂಪನಿಯಲ್ಲಿ ಎಂಜಿನಿಯರ್ ಆಗಿರುವ ಅನ್ಯ ರಾಜ್ಯದ ಸಂತ್ರಸ್ತ ಯುವತಿಯು ರಾತ್ರಿ 11.30ರ ಸುಮಾರಿಗೆ ಮಾರತ್‌ ಹಳ್ಳಿಯ ಇಕೋ ವರ್ಲ್ಡ್ ಟೆಕ್ ಪಾರ್ಕ್ ಗೇಟ್ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಹಿಂಬಾಲಿಸಿದ್ದ ದುಷ್ಕರ್ಮಿ, ಬೈಕ್ ನಿಲ್ಲಿಸಿ ಯುವತಿಯ ಖಾಸಗಿ ಅಂಗಾಂಗಗಳನ್ನು ಸ್ಪರ್ಶಿಸಿ ಕಿರುಕುಳ ನೀಡಿದ್ದ. ಇದರಿಂದ ಗಾಬರಿಯಾದ ಯುವತಿಯು ಚೀರಾಡುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದ.

ಈ ಸಂಬಂಧ ಸಂತ್ರಸ್ತ ನೀಡಿದ ದೂರು ಆಧರಿಸಿ ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಪರಿಶೀಲಿಸಿ ಆರೋಪಿ ಶ್ರೀಕಾಂತ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ఎంబిఎ ಪದವೀಧರನಾಗಿರುವ ಆರೋಪಿ ಶ್ರೀಕಾಂತ್ ನಗರದ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾನೆ. ರಾತ್ರಿ ವೇಳೆ ಒಂಟಿಯಾಗಿ ನಡೆದುಹೋಗುವ ಯುವತಿಯರನ್ನು ಹಿಂಬಾಲಿಸಿ ಕಿರುಕುಳ ನೀಡುವ ಚಾಳಿ ಬೆಳೆಸಿಕೊಂಡಿದ್ದಾನೆ. ಆರೋಪಿ ಈ ಹಿಂದೆಯೂ ಹಲವು ಯುವತಿಯರ ಬಳಿ ಅಸಭ್ಯ ವರ್ತನೆ ತೋರಿದ್ದಾನೆ. ಆರೋಪಿಯಿಂದ ಕಿರುಕುಳಕ್ಕೆ ಒಳಗಾದವರು ದೂರು ನೀಡಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಪೊಲೀಸರು ಹೇಳಿದ್ದಾರೆ.

You may also like