Home » Arvind Kejriwal: ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಜಾಮೀನಿಗಾಗಿ ಮಾವು ಸೇವನೆ- ಇಡಿ ಆರೋಪ

Arvind Kejriwal: ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಜಾಮೀನಿಗಾಗಿ ಮಾವು ಸೇವನೆ- ಇಡಿ ಆರೋಪ

1 comment
Arvind kejriwal

Arvind Kejriwal: “ಟೈಪ್ 2 ಮಧುಮೇಹಿ ಆಗಿರುವ ದಿಲ್ಲಿ ಸಿಎಂ ಅರವಿಂದ್ ಕೇಜಿವಾಲ್ ತಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಂಡು ವೈದ್ಯಕೀಯ ಕಾರಣದ ಮೇರೆಗೆ ಜಾಮೀನು ಪಡೆಯಲೆಂದೇ ತಿಹಾರ್ ಜೈಲಿನಲ್ಲಿ ಮಾವಿನ ಹಣ್ಣು, ಆಲೂ ಪುರಿ ಹಾಗೂ ಸಿಹಿತಿಂಡಿಗಳನ್ನು ಸೇವಿಸುತ್ತಿ,ದ್ದಾರೆ,” ಎಂಬ ಜಾರಿ ನಿರ್ದೇಶನಾಲಯದ ಆರೋಪವನ್ನು ಕೇಜಿವಾಲ್ ಪರ ವಕೀಲರು ರೌಸ್ ಅವೆನ್ಯೂ ಕೋರ್ಟ್‌ನಲ್ಲಿ ಶುಕ್ರವಾರ ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿ: WhatsApp Ban: ಐಫೋನ್ ಬಳಕೆದಾರರಿಗೆ ಆಘಾತ- ವಾಟ್ಸಪ್ ನಿಷೇಧಿಸಲು ಸರ್ಕಾರ ಆದೇಶ !!

“ನಮ್ಮ ಕಕ್ಷಿದಾರರು ಕೇವಲ ಜಾಮೀನು ಪಡೆಯುವುದಕ್ಕಾಗಿ ಶುಗರ್ ಲೆವೆಲ್ ಹೆಚ್ಚಿಸಿ ಕೊಂಡು ಪಾರ್ಶ್ವವಾಯುವಿನಂಥ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದುಕೊಳ್ಳಲು ಸಾಧ್ಯವೇ? ಜಾರಿ ನಿರ್ದೇಶನಾಲಯ ಮಾಡಿ ರುವ ಆರೋಪಗಳೆಲ್ಲವೂ ನಿರಾಧಾರ” ಎಂದು ವಕೀಲ ಅಭಿಷೇಕ್ ಮನು ಸಿಂಫ್ಟಿ ವಾದಿಸಿದರು. ಅಲ್ಲದೇ “ಕೇಜ್ರವಾಲ್ ಅವರ ಆಹಾರ ಸೇವನೆಯನ್ನೂ ಇ.ಡಿ ಕ್ಷುಲ್ಲಕ ಕಾರಣಕ್ಕೆ ರಾಜಕೀಯಗೊಳಿಸುತ್ತಿದೆ,” ಎಂದು ಆರೋಪಿಸಿದರು.

ಇದನ್ನೂ ಓದಿ: Teachers Transfer: ಶಿಕ್ಷಕರ ವರ್ಗಾವಣೆ; ಸಕಲ ಸಿದ್ಧತೆ ಮಾಡಿಕೊಂಡ ಶಿಕ್ಷಣ ಇಲಾಖೆ

“ತಿಹಾರ್ ಜೈಲು ಸೇರಿದ ಬಳಿಕ ಕೇಜ್ರಿವಾಲ್ ಅವರಿಗೆ 48 ಬಾರಿ ಮನೆಯೂಟ ಸರಬರಾಜಾಗಿದೆ. ಕೇವಲ 3 ಬಾರಿ ಮಾತ್ರ ಮಾವು ಸೇವಿಸಿದ್ದಾರೆ. ಮಾವಿನ ಹಣ್ಣಿನಲ್ಲಿ ಅನ್ನದಲ್ಲಿ ಇರುವುದಕ್ಕಿಂತಲೂ ಕಡಿಮೆ ಸಕ್ಕರೆ ಅಂಶ ಇರುತ್ತದೆ. ಇನ್ನು ಅವರು ಬಾರಿ ಮಾತ್ರ ಸಿಹಿ ತಿಂಡಿಗಳನ್ನು ತಿಂದಿದ್ದಾರೆ. ಇನ್ನು ಚೈತ್ರ ನವರಾತ್ರಿ ಪ್ರಸಾದದ ರೂಪದಲ್ಲಿ ಆಲೂ ಪೂರಿ ಸೇವನೆ ಮಾಡಿದ್ದಾರೆ. ಇನ್ನು ಚಹಾ ಸೇವನೆ ವೇಳೆ ಕೃತಕ ಸಿಹಿಯುಳ್ಳ ಶುಗರ್ ಫ್ರಿ ಟ್ಯಾಬ್ಲೆಟ್‌ಗಳನ್ನು ಬಳಸುತ್ತಿದ್ದಾರೆ,” ಎಂದು ಅಭಿಷೇಕ್ ಮನು ಸಿಂಫ್ಟಿ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಕೇಜ್ರವಾಲ್ ಅವರ ಆಹಾರ ಸೇವನೆ ಕುರಿತ ‘ಡಯಟ್ ಚಾರ್ಟ್’ ಅನ್ನು ಕೂಡ ನ್ಯಾಯಾಲಯಕ್ಕೆ ಅವರು ಸಲ್ಲಿಸಿದ್ದಾರೆ.

You may also like

Leave a Comment