Home » Crime News: ಪೊಲೀಸರಿಂದಲೇ ಹೆಡ್‌ಕಾನ್ಸ್ಟೇಬಲ್‌ ಮೇಲೆ ಮಾರಣಾಂತಿಕ ಹಲ್ಲೆ !

Crime News: ಪೊಲೀಸರಿಂದಲೇ ಹೆಡ್‌ಕಾನ್ಸ್ಟೇಬಲ್‌ ಮೇಲೆ ಮಾರಣಾಂತಿಕ ಹಲ್ಲೆ !

0 comments
Crime News Bangalore

Crime News: ಪೊಲೀಸರಿಂದಲೇ ಹೆಡ್‌ಕಾನ್ಸ್ಟೇಬಲ್‌ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಆನೇಕಲ್‌ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ಹೆಡ್‌ಕಾನ್ಸ್ಟೇಬಲ್‌ ಅಪ್ರೋಜ್‌ಖಾನ್‌ ಮೇಲೆ ಹಲ್ಲೆ ಮಾಡಲಾಗಿದೆ.

ಗೋವಿಂದರಾಜನಗರ ಠಾಣೆಯ ಪೊಲೀಸರು ಅಪ್ರೋಚ್‌ ಖಾನ್‌ ಮೇಲೆ ಹಲ್ಲೆ ಮಾಡಿದ್ದು, ಅವರನ್ನು ಅಪಹರಣ ಮಾಡಿ ತೀವ್ರ ಹಲ್ಲೆ ಮಾಡಲಾಗಿದೆ. ಪೊಲೀಸರ ಗೂಂಡಾ ವರ್ತನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇನ್ಸ್‌ಪೆಕ್ಟರ್‌ ಗುರುಪ್ರಸಾದ್‌ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಆರೋಪವಿದೆ. ಎಎಸ್‌ಐ ಹನುಮಗೌಡ ಕಾನ್ಸ್ಟೇಬಲ್‌ಗಳಾದ ಅರ್ಜುನ ಕಾಂಬಳೆ, ಪ್ರಸನ್ನ, ಸುರೇಶ್‌ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಅತ್ತಿಬೆಲೆ ಟೋಲ್‌ ಬಳಿ ಕಾರುಗಳನ್ನು ಪೊಲೀಸರು ನಿಲ್ಲಿಸಿಕೊಂಡಿದ್ದ ಸಂದರ್ಭದಲ್ಲಿ ಬೈಕ್‌ನಲ್ಲಿ ಅಪ್ರೋಜ್‌ಖಾನ್‌ ಪುತ್ರ ಅಲಿ ಅಜ್ಗರ್‌ ಖಾನ್‌ ಬೇಕರಿ ಬಂದಿದ್ದು, ಬೈಕ್‌ ಅಡ್ಡಗಟ್ಟಿದ ಪೊಲೀಸರು ದಾಖಲಾತಿ ಚೆಕ್‌ ಮಾಡಿ, ಕತ್ತಿನ ಪಟ್ಟಿ ಹಿಡಿದು ಅಜ್ಗರ್‌ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನ ತಂದೆ ಪೊಲೀಸ್‌ ಎಂದು ಹೇಳಿದರೂ ಕೇಳದೇ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾನೆ.

ಈ ಸಂದರ್ಭದಲ್ಲಿ ಸ್ಥಳಕ್ಕೆ ಅತ್ತಿಬೆಲೆ ಹೆಡ್‌ಕಾನ್ಸ್ಟೇಬಲ್‌ ಅಪ್ರೋಜ್‌ ಖಾನ್‌ ನನ್ನ ಮಗನನ್ನು ಯಾಕೆ ಹೊಡೆಯುತ್ತೀರಿ ಎಂದು ಕೇಳಿದಾಗ, ನೀನು ಯಾವ ಪೊಲೀಸ್‌ ಎಂದು ನಿಂದನೆ ಮಾಡಿ ಹಲ್ಲೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಅತ್ತಿಬೆಲೆ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಅಪ್ರೋಜ್‌ ಖಾನ್‌ ದೂರು ನೀಡಿದ್ದಾರೆ. ದೂರು ನೀಡಿದರೂ ಪೊಲೀಸರು ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

You may also like