0
Crime: ಕುಂದಾಪುರ ಪುರಸಭೆ ವ್ಯಾಪ್ತಿಯ ಕೋಡಿ ದೇವಸ್ಥಾನದ ಸಮೀಪ ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಕಾಪು ತಾಲೂಕು ಸುಭಾಷ್ ನಗರ ಸರ್ಕಾರಿಗುಡ್ಡೆ ನಿವಾಸಿ ಮುದಾಸ್ಸಿರ್ (23) ಮತ್ತು ಉಡುಪಿ ತಾಲೂಕು ಉದ್ಯಾವರದ ಅಡೆನ್ ಲೋಬೋ (18) ಎಂದು ತಿಳಿದು ಬಂದಿದೆ.
ಬಂಧಿತರಿಂದ ಸುಮಾರು 2,49,440 ರೂ. 124.72 . ಗ್ರಾಂ ಎಂಡಿಎಂಎ, 4,540 ರೂ. ನಗದು ಹಾಗೂ ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
