Home » Parappa Agrahara Jail: ಕೈದಿಗೆ ಮೊಬೈಲ್ ಮಾರಲು ಯತ್ನ: ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿ ಬಂಧನ

Parappa Agrahara Jail: ಕೈದಿಗೆ ಮೊಬೈಲ್ ಮಾರಲು ಯತ್ನ: ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿ ಬಂಧನ

0 comments
Mobile charger

Parappa Agrahara Jail: ಪರಪ್ಪನ್ನ ಅಗ್ರಹಾರ ಜೈಲಿನಲ್ಲಿ 20 ಸಾವಿರ ರೂ.ಗೆ ಮೊಬೈಲ್‌ ಮಾರಾಟ ಮಾಡಲು ಹೋಗಿ ಜೈಲು ಸಿಬ್ಬಂದಿಯೇ ಸಿಕ್ಕಿಬಿದ್ದ ಘಟನೆ ನಡೆದಿದೆ.

ಕೈದಿಗಳಿಗೆ ಮೊಬೈಲ್ ಸರಬರಾಜು ಮಾಡುತ್ತಿದ್ದ ಜೈಲು ವೀಕ್ಷಕ (ವಾರ್ಡನ್) ‌ಅಮರ್ ಪ್ರಾಂಜೆ (29) ನನ್ನ ಪರಪ್ಪನ ಅಗ್ರಹಾರ (Parappa Agrahara Jail) ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮೊಬೈಲ್‌ ಮಾರಾಟ ಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಾನೆ. 

ಅಮರ್‌ ಎಂಬ ಸಿಬ್ಬಂದಿ ಇದೇ ಅಕ್ಟೋಬರ್‌ 23ರಂದು ಕರ್ತವ್ಯಕ್ಕೆ ಆಗಮಿಸಿದ್ದ. ಈ ವೇಳೆ ಪ್ರವೇಶದ್ವಾರದಲ್ಲಿ ಕೆಎಸ್‌ಐಎಸ್‌ಎಫ್ (KSISF) ಸಿಬ್ಬಂದಿ ತಪಾಸಣೆ ನಡೆಸಿದಾಗ ಒಳುಡುಪಿನಲ್ಲಿ ಒಂದು ಸ್ಮಾರ್ಟ್‌ಫೋನ್‌, ಇಯರ್‌ ಫೋನ್‌ ಪತ್ತೆಯಾಗಿದೆ. ತಕ್ಷಣ ಜೈಲಿನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಮರ್ ಪ್ರಾಂಜೆಯನ್ನ ಮೊಬೈಲ್ ಸಮೇತ ಪೊಲೀಸರು ಬಂಧಿಸಿದ್ದಾರೆ. ಜೈಲು ಅಧೀಕ್ಷಕ ಹೆಚ್.ಎ ಪರಮೇಶ್ ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಮರ್ ವಿಚಾರಣೆ ವೇಳೆ ಜೈಲಿನಲ್ಲಿರುವ ಕೊಲೆ ಪ್ರಕರಣದ ಕೈದಿಯೊಬ್ಬರಿಂದ 20 ಸಾವಿರ ರೂ.ಗಳನ್ನ ಪಡೆದು ಹೊರಗಡೆಯಿಂದ ಮೊಬೈಲ್ ತಂದು ಕೊಡಲು ಮುಂದಾಗಿದ್ದೆ. ಅದರಂತೆ 10 ಸಾವಿರ ರೂ. ಮುಂಗಡ ಹಣ ಪಡೆದು ಮೊಬೈಲ್ ತಂದು ಒಳಗಡೆ ತಲುಪಿಸಲು ಪ್ರಯತ್ನಿಸಿದ್ದೆ ಎಂದು ಆರೋಪಿ ಅಮರ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. 

You may also like