Home » Belthangady : ಚಾಕುವಿನಿಂದ ಇರಿದು ವ್ಯಕ್ತಿ ಕೊಲೆಗೆ ಯತ್ನ!!

Belthangady : ಚಾಕುವಿನಿಂದ ಇರಿದು ವ್ಯಕ್ತಿ ಕೊಲೆಗೆ ಯತ್ನ!!

0 comments

Belthangady : ಚಾಕುವಿನಿಂದ ಇರಿದು ವ್ಯಕ್ತಿ ಒಬ್ಬರನ್ನು ಕೊಲೆ ಮಾಡುವ ಪ್ರಯತ್ನ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.

ಹೌದು, ಕ್ಷುಲ್ಲಕ ವಿಚಾರವೊಂದಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಅದು ಚೂರಿ ಇರಿದು ಕೊಲೆ ಮಾಡುವ ಹಂತಕ್ಕೆ ಹೋದ ಪ್ರಕರಣ ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಸಂತೆ ಮಾರುಕಟ್ಟೆಯಲ್ಲಿ ನಡೆದಿದೆ.

ಡೆನ್ನಿಸ್ ಪಟೋ ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡ ವ್ಯಕ್ತಿ. ಸದ್ಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಎ.26ರಂದು ರಾತ್ರಿಯ ವೇಳೆ ಅಳದಂಗಡಿ ಸಂತೆ ಮಾರುಕಟ್ಟೆಯ ಒಳಗೆ ಕ್ಷುಲ್ಲಕ ಕಾರಣಕ್ಕೆ ಶೀನ ಹಾಗೂ ಡೆನ್ನಿಸ್ ಪಿಂಟೋ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಡೆನ್ನಿಸ್ ರನ್ನು ನೆಲಕ್ಕೆ ದೂಡಿ ಹಾಕಿದ ಆರೋಪಿ ಶೀನ ಕುತ್ತಿಗೆಗೆ ಹಾಗೂ ಎಡಗೈಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

You may also like