5
Ricky Rai: ಮಾಜಿ ಭೂಗತ ದೊರೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯಾಗಿದ್ದ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧಾಗೆ ಹೈಕೋರ್ಟ್ ರಿಲೀಫ್ ನೀಡಿದೆ.
ಪ್ರಕರಣ ರದ್ದು ಕೋರಿ ಅನುರಾಧಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ಸಂದರ್ಣ ಅನುರಾಧ ಪರ ವಕೀಲ ವೆಂಕಟೇಶ್ ಅರಬಟ್ಟಿ, ವಿನಾಕಾರಣ ಪ್ರಕರಣದಲ್ಲಿ ಅನುರಾಧಾ ರೈ ಹೆಸರು ಬಂದಿದೆ. ಆಸ್ತಿ ವಿವಾದ ಆರು ತಿಂಗಳ ಹಿಂದೆ ಇತ್ಯರ್ಥವಾಗಿದೆ. ಎ.14 ರಂದೇ ಅನುರಾಧ ರೈ ಪುತ್ರಿಯೊಂದಿಗೆ ಯುರೋಪ್‌ಗೆ ತೆರಳಿದ್ದಾರೆ. ಕೊಲೆಯತ್ನ ಕೇಸ್‌ಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎನ್ನುವ ವಾದ ಮಂಡಿಸಿದ್ದು, ಈ ವೇಳೆ ಹೈಕೋರ್ಟ್ ಅನುರಾಧ ರೈ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿದೆ.
