Home » Dharwad News: ಹಿಂದೂ ಯುವತಿಯರಿಗೆ ಮೆಸೇಜ್‌ ಮಾಡುತ್ತಿದ್ದ ಮುಸ್ಲಿಂ ಯುವಕ; ಬಜರಂಗದಳ ಕಾರ್ಯಕರ್ತರಿಂದ ದಾಳಿ!

Dharwad News: ಹಿಂದೂ ಯುವತಿಯರಿಗೆ ಮೆಸೇಜ್‌ ಮಾಡುತ್ತಿದ್ದ ಮುಸ್ಲಿಂ ಯುವಕ; ಬಜರಂಗದಳ ಕಾರ್ಯಕರ್ತರಿಂದ ದಾಳಿ!

0 comments

Dharwad News: ಹಿಂದೂ ಯುವತಿಯರಿಗೆ ಮೆಸೇಜ್‌ ಮಾಡುತ್ತಿದ್ದ ಮುಸ್ಲಿಂ ಯುವಕನನ್ನು ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆಯೊಂದು ಧಾರವಾಡದಲ್ಲಿ ನಡೆದಿದೆ. ಜ್ಯುಬಿಲಿ ಸರ್ಕಲ್‌ನಲ್ಲಿರುವ ರಿಯಲಯನ್ಸ್‌ ಡಿಜಿಟಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕ ಫಯಾಜ್‌ ಎಂಬಾತನೇ ಆರೋಪಿ.

ಹಿಂದೂ ಯುವತಿಯರಿಗೆ ಮೆಸೇಜ್‌ ಮಾಡಿ ಸಲುಗೆ ಬೆಳೆಸಿ ಬಳಿಕ ವೀಡಿಯೋ ಕಾಲ್‌ ಮೂಲಕ ಅಂಗಾಂಗ ತೋರಿಸುವಂತೆ ಒತ್ತಾಯಿಸಿ ಅದರ ಸ್ಕ್ರೀನ್‌ ಶಾಟ್‌ ತೆಗೆದು ನಂತರ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಎನ್ನಲಾಗಿದೆ.

ರಿಲಾಯನ್ಸ್ ಡಿಜಿಟಲ್‌ಗೆ ಬರುತ್ತಿದ್ದ ಗ್ರಾಹಕರು ಖರೀದಿಸುವಾಗ ಮೊಬೈಲ್ ನಂ‌ಬರ್ ನೀಡುತ್ತಾರೆ. ಅದರಲ್ಲಿನ ಹಿಂದೂ ಯುವತಿ ಹಾಗೂ ಮಹಿಳೆಯರ ನಂಬರ್ ತೆಗೆದು ಅವರಿಗೆ ಸಂಪರ್ಕ ಮಾಡುತ್ತಿದ್ದ ಆರೋಪಿ ಫಯಾಜ್, ಅವರೊಂದಿಗೆ ಸ್ನೇಹ ಬೆಳೆಸುತ್ತಿದ್ದ. ವಿಡಿಯೋ ಕಾಲ್​ನಲ್ಲಿ ದೃಶ್ಯ ಸೆರೆಹಿಡಿದು ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದನು.

ಇದನ್ನು ತಿಳಿದ ಬಜರಂಗದಳದ ಕಾರ್ಯಕರ್ತರು, ರಿಲಯನ್ಸ್‌ ಡಿಜಿಟಲ್‌ಗೆ ನುಗ್ಗಿದ್ದಾರೆ. ನಂತರ ಫಯಾಜ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೀಗ ಉಪನಗರ ಠಾಣಾ ಪೊಲೀಸರು ಫಯಾಜ್‌ನನ್ನು ವಶಕ್ಕೆ ಪಡೆದಿದ್ದಾರೆ. ನಂತರ ಪೊಲೀಸರು ನೈತಿಕವಾಗಿ ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರನ್ನು ಪೊಲೀಸರು ತರಾಟೆಗೆ ತೆಗೆದುಕೊಂಡಿರುವ ಕುರಿತು ವರದಿಯಾಗಿದೆ. ಮೊದಲು ಮಾಹಿತಿ ತಮಗೆ ನೀಡುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.

You may also like

Leave a Comment