Home » Bangalore: ನನ್ನ ಮುಟ್ಟಬೇಡ, ಸೌಂದರ್ಯ ಹಾಳಾಗುತ್ತೆ, 60 ವರ್ಷ ಆದ ಮೇಲೆ ಮಕ್ಕಳು ಮಾಡೋಣ-ಹೆಂಡತಿ ಡಿಮ್ಯಾಂಡ್‌ಗೆ ಗಂಡ ಸುಸ್ತು!

Bangalore: ನನ್ನ ಮುಟ್ಟಬೇಡ, ಸೌಂದರ್ಯ ಹಾಳಾಗುತ್ತೆ, 60 ವರ್ಷ ಆದ ಮೇಲೆ ಮಕ್ಕಳು ಮಾಡೋಣ-ಹೆಂಡತಿ ಡಿಮ್ಯಾಂಡ್‌ಗೆ ಗಂಡ ಸುಸ್ತು!

0 comments

Bangalore: ನನ್ನ ಮುಟ್ಟಬೇಡ, ನನ್ನ ಬ್ಯೂಟಿ ಹಾಳಾಗುತ್ತೆ ಎಂದು ಹೆಂಡತಿ ಗಂಡನಿಗೆ ಹೇಳಿದ್ದು, ಜೊತೆಗೆ ಆಕೆಯ ಡಿಮ್ಯಾಂಡ್‌ ಮೇಲೆ ಡಿಮ್ಯಾಂಡ್‌ ಮಾಡೋ ವೈಖರಿಗೆ ಗಂಡನೋರ್ವ ಸುಸ್ತಾಗಿರುವ ಘಟನೆ ವೈಯಾಲಿಕಾವಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರತಿದಿನ ಹೆಂಡತಿ ಕೊಡುವ ಕಾಟಕ್ಕೆ ಬೇಸತ್ತ ಗಂಡ ಆಕೆಯ ವಿರುದ್ಧ ಇದೀಗ ಠಾಣೆ ಮೆಟ್ಟಿಲೇರಿದ್ದಾನೆ.

ಪತಿ ಶ್ರೀಕಾಂತ್‌ ಎರಡು ವರ್ಷದ ಹಿಂದೆ ಮದುವೆಯಾಗಿದ್ದ. ಆದರೆ ಹೆಂಡತಿ ಸಂಸಾರ ನಡೆಸಲು ನೋ ಎಂದಿದ್ದಾಳೆ. ನನ್ನ ಮುಟ್ಟ ಬೇಡ, ಬ್ಯೂಟಿ ಹಾಳಾಗುತ್ತೆ, ನನಗೆ ಈಗ ಮಕ್ಕಳು ಬೇಡ, 60 ವರ್ಷ ಆದ ನಂತರ ಮಕ್ಕಳನ್ನು ಮಾಡಿಕೊಳ್ಳುವ ಎಂದು ಹೇಳಿದ್ದಾಳೆ ಪತ್ನಿ.

ಇಲ್ಲಿಗೇ ಮುಗಿದಿಲ್ಲ, ಡಿವೋರ್ಸ್‌ ಕೊಡು ಇಲ್ಲದಿದ್ದರೆ 45ಲಕ್ಷ ರೂಪಾಯಿ ಕೊಡು ಎಂದು ಡಿಮ್ಯಾಂಡ್‌ ಇಟ್ಟಿದ್ದಾಳಂತೆ. ನನ್ನದೇನಾದರೂ ಮುಟ್ಟಿದರೆ ಡೆತ್‌ನೋಟ್‌ ಬರೆದು ಸಾಯ್ತೀನಿ ಎಂದು ಗಂಡನನ್ನೇ ಬೆದರಿಸಿ, ಬ್ಲ್ಯಾಕ್‌ಮೇಲ್‌ ಮಾಡಿದ್ದಾಳೆ ಈ ಪತ್ನಿ. ಮದುವೆಯಾದರೂ ತಾಳಿ, ಕಾಲುಂಗುರ ಹಾಕಲು ಇಷ್ಟ ಪಡಲ್ವಂತೆ ಈಕೆ.

ಟೆಕ್ಕಿ ಶ್ರೀಕಾಂತ್‌ 2022 ರಲ್ಲಿ ಯುವತಿಯನ್ನು ಮದುವೆಯಾಗಿದ್ದ. ಮದುವೆಯಾದಾಗಿನಿಂದ ಪತ್ನಿ ಕಿರುಕುಳ ನೀಡುತ್ತಲೇ ಇದ್ದಾಳೆ. ಪ್ರತಿ ದಿನ ಖರ್ಚಿಗೆ ರೂ.5000 ಕೇಳುವುದು, ಮಕ್ಕಳು ಬೇಡ, ದತ್ತು ಪಡೆಯೋಣ, ಶ್ರೀಕಾಂತ್‌ ಕೆಲಸಕ್ಕೆ ಕುಳಿತರೆ ಪತ್ನಿ ಜೋರಾಗಿ ಸಾಂಗ್‌ ಹಾಕಿ ಡಾನ್ಸ್‌ ಮಾಡುವುದು, ಕೆಲಸಕ್ಕೆ ಡಿಸ್ಟರ್ಬ್‌ ಮಾಡುವುದು ಮಾಡುತ್ತಾಳಂತೆ. ಮದುವೆಯಾದಾಗಿನಿಂದ ಖುಷಿ, ಸಂತೋಷ ಇಲ್ಲ. ಪತ್ನಿ ಕಿರುಕುಳದಿಂದ ಬೇಸತ್ತಿದ್ದೇನೆ ಎಂದು ಪತಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಈ ಕುರಿತು ಇದೀಗ ವೈಯಾಲಿಕಾವಲ್‌ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲು ಮಾಡಿದ್ದಾರೆ.

You may also like