Bangalore: ಮನೆ ಮುಂದೆ ಶರ್ಟ್ ತೆಗೆದು ಅರೆ ಬೆತ್ತಲೆಯಾಗಿ ನಿಂತಿದ್ದನ್ನು ಪ್ರಶ್ನಿಸಿದ ನೆರೆಹೊರೆಯವರ ಮೇಲೆ ವ್ಯಕ್ತಿಯೊಬ್ಬಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಶಿವಾಜಿನಗರಪೊಲೀಸ್ ಠಾಣಾವ್ಯಾಪ್ತಿಯಲ್ಲಿ ನಡೆದಿದೆ.
ಕ್ರೀನ್ಸ್ ರಸ್ತೆ ಸಮೀಪದ ರಾಜೀವ್ ಗಾಂಧಿ ನಗರದ ಕಾರ್ತಿಕ್ ಈ ಕೃತ್ಯ ಎಸಗಿದ್ದು, ತನ್ನ ಮನೆ ಮುಂದೆ ರಾತ್ರಿ ಅರೆ ಬೆತ್ತಲಾಗಿ ನಿಂತಿದ್ದನ್ನು ಪಕ್ಕದ ಮನೆಯವರು ಪ್ರಶ್ನಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆತಿರುಗಿದೆ. ಈಹಂತನಲ್ಲಿ ಕೆರಳಿದ ಕಾರ್ತಿಕ್, ನೆರೆಮನೆಯ ಸುಮಾರು 9ಕ್ಕೂ ಹೆಚ್ಚಿನ ಜನರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆ ಬದಿ ವ್ಯಾಪಾರ ಮಾಡಿ ಕೊಂಡು ಜೀವನ ಸಾಗಿಸುವ ಕಾರ್ತಿಕ್, ರಾಜೀವ್ ಗಾಂಧಿ ನಗರದ ಮನೆಯಲ್ಲಿ ತನ್ನ ಕುಟುಂಬ ಜತೆ ನೆಲೆಸಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ನೆರೆಹೊರೆಯವರ ಮಧ್ಯೆ ಜಗಳವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
