Home » Bangalore: ಮಹಿಳೆಗೆ ಗುಪ್ತಾಂಗ ತೋರಿಸುತ್ತಿದ್ದ ಯುವಕ ಅರೆಸ್ಟ್‌ !

Bangalore: ಮಹಿಳೆಗೆ ಗುಪ್ತಾಂಗ ತೋರಿಸುತ್ತಿದ್ದ ಯುವಕ ಅರೆಸ್ಟ್‌ !

0 comments

Arrest: ಮಹಿಳೆಯರಿಗೆ ಗುಪ್ತಾಂಗ ತೋರಿಸಿ ವಿಕೃತಿ ಮೆರೆಯುತ್ತಿದ್ದ ಯುವಕನನ್ನು ಶಿವಾಜಿನಗರ ಪೊಲೀಸರು ಬಂಧನ ಮಾಡಿದ್ದಾರೆ.

ಬಂಧನ ಮಾಡಿದ ಆರೋಪಿಯನ್ನು ಕಾರ್ತಿಕ್‌ ಎಂದು ಗುರುತಿಸಲಾಗಿದೆ.

ಎ.13 ರಂದು ಕ್ವೀನ್ಸ್‌ ರಸ್ತೆಯ ರಾಜೀವ್‌ ಗಾಂಧಿ ಕಾಲೋನೆಯಲ್ಲಿ ಊಟ ಮುಗಿಸಿ ಎರಡನೇ ಮಹಡಿಗೆ ಮಲಗಲೆಂದು ಮಹಿಳೆ ತೆರಳುತ್ತಿದ್ದು, ಈ ವೇಳೆ ಎದುರು ಮನೆಯ ಆರೋಪಿ ಪ್ಯಾಂಟ್‌ ಬಿಚ್ಚಿ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಮಹಿಳೆಯ ಪತಿಯ ಮೇಲೆ ಹಲ್ಲೆ ಮಾಡಿದ್ದ. ಅಲ್ಲದೇ ಜಗಳ ಬಿಡಿಸಲು ಬಂದವರ ಮೇಲೆ ಅಟ್ಯಾಕ್‌ ಮಾಡಿದ್ದ.

ಕಾರ್ತಿಕ್‌ನನ್ನು ಶಿವಾಜಿನಗರ ಪೊಲೀಸರು ಬಂಧನ ಮಾಡಿ ಜೈಲಿಗಟ್ಟಿದ್ದಾರೆ. ವಿಚಾರಣೆ ಸಂದರ್ಭ ನಾನು ಮೂತ್ರವಿಸರ್ಜನೆ ಮಾಡುತ್ತಿದ್ದೆ. ಆ ಸಮಯದಲ್ಲಿ ಮಹಿಳೆ ಬಂದಿದ್ದಾರೆ. ಈ ಸಮಯದಲ್ಲಿ ಗಲಾಟೆಯಾಗಿದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

You may also like