Home » Bantwal: ಬಸ್ಸಿನ ಚಾಲಕ-ನಿರ್ವಾಹಕರಿಗೆ ಬೆದರಿಕೆ; ದೂರು ದಾಖಲು!

Bantwal: ಬಸ್ಸಿನ ಚಾಲಕ-ನಿರ್ವಾಹಕರಿಗೆ ಬೆದರಿಕೆ; ದೂರು ದಾಖಲು!

0 comments

Bantwala: ಕರಿಯಂಗಳ ಗ್ರಾಮದ ಪಲ್ಲಿಪಾಡಿಯಲ್ಲಿ ಬಸ್‌ ತಿರುಗಿಸುವ ವಿಚಾರದಲ್ಲಿ ಖಾಸಗಿ ಬಸ್‌ನ್ನು ತಡೆದ ತಂಡವೊಂದು ಚಾಲಕ-ನಿರ್ವಾಹಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿ ಓಡಿದ ಘಟನೆ ಎ.21 ರಂದು ನಡೆದಿದೆ.

ರಾತ್ರಿ 7.40 ರ ಸುಮಾರಿಗೆ ಬಸ್‌ ಪೊಳಲಿ-ಕೊಳತ್ತಮಜಲು ಮಾರ್ಗವಾಗಿ ಸಂಚರಿಸುವ ಸಂದರ್ಭದಲ್ಲಿ ಬಸ್‌ ತಿರುಗಿಸುವ ವಿಚಾರದಲ್ಲಿ ಆರೋಪಿಗಳಾದ ಉಮೇಶ ಶೆಟ್ಟಿ, ವಿಜಯ, ಕಿಶೋರ, ಪ್ರಶಾಂತ್‌ ಹಾಗೂ ಇತರರು ತಕರಾರು ತೆಗೆದಿದ್ದಾರೆ.

ಬಸ್‌ನ ನಿರ್ವಾಹಕ ಅಭಿಜಿತ್‌ ಶೆಟ್ಟಿ ದೂರು ನೀಡಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like