Bantwala: ಫೆ.25 ರ ಸಂಜೆ ಏಕಾಏಕಿ ನಾಪತ್ತೆಯಾಗಿರುವ ಫರಂಗಿಪೇಟೆ ಕಿದೆಬೆಟ್ಟಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಗಂತ್ ಪತ್ತೆಗೆ ಪೊಲೀಸ್ ತನಿಖೆ ಮುಂದುವರಿದರೂ ಆತನ ಬಗ್ಗೆ ಯಾವುದೇ ಮಹತ್ವದ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ. ಪ್ರಕರಣ ಇನ್ನಷ್ಟೂ ನಿಗೂಢತೆಯನ್ನು ಉಂಟು ಮಾಡಿದೆ. ಕಳೆದ 7 ರಂದು ದಿನಗಳ ಹಿಂದೆ ನಾಪತ್ತೆಯಾಗಿರುವ ದಿಗಂತ್ ಕುರಿತು ರವಿವಾರವೂ ಪೊಲೀಸರು ಆತನ ಕಾಲೇಜಿನಲ್ಲಿ ವಿಚಾರಣೆಯನ್ನು ಮಾಡಿದ್ದಾರೆ.
ಆತನ ಮೊಬೈಲ್ ಸಂದೇಶಗಳ ಆಧಾರದಲ್ಲಿ ಆತ ಎಲ್ಲಿಗೆ ಹೋಗಿದ್ದಾನೆ ಎನ್ನುವುದರ ಕುರಿತು ತನಿಖೆ ಮುಂದುವರಿದಿದೆ. ಮೊಬೈಲ್ ಹಿಸ್ಟರಿಯ ಚಾಟ್ ಮೂಲಕ ಒಂದಷ್ಟು ಪ್ರಮುಖ ಅಂಶಗಳು ಪೊಲೀಸರ ಗಮನಕ್ಕೆ ಬಂದಿದೆ. ಇದು ತನಿಖೆಯಲ್ಲಿ ಎಷ್ಟು ಉಪಯೋಗಕ್ಕೆ ಬರಲಿದೆ ಎನ್ನುವುದು ಸ್ಪಷ್ಟಗೊಂಡಿಲ್ಲ.
ತನಿಖೆಯಲ್ಲಿ ಪರಿಣಿತ ಪೊಲೀಸ್ ಅಧಿಕಾರಿಗಳು ಒಳಗೊಂಡಿದ್ದು, ವಿವಿಧ ಠಾಣೆಗಳ ಪಿಎಸ್‌ಐಗಳು ವಿವಿದೆಡೆ ಆತನ ಬಗ್ಗೆ ಮಾಹಿತಿ ಸಂಗ್ರಹ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಇನ್ನೊಂದು ಕಡೆ ಆತ ನಾಪತ್ತೆಯಾದ ನಂತರ ಯಾರನ್ನಾದರೂ ಸಂಪರ್ಕ ಮಾಡಿದ್ದಾನೆಯೇ ಎನ್ನುವುದರ ಕುರಿತು ತನಿಖೆ ಮುಂದುವರಿದಿದೆ.
ಈ ನಾಪತ್ತೆ ಪ್ರಕರಣಕ್ಕೆ ಒಂದೆರಡು ದಿನಗಳಲ್ಲಿ ಸ್ಪಷ್ಟ ಚಿತ್ರಣ ದೊರೆಯುವ ಕುರಿತು ವಿಶ್ವಾಸವನ್ನು ಪೊಲೀಸ್ ಮೂಲಗಳು ವ್ಯಕ್ತಪಡಿಸಿದೆ.
