Home » Bengaluru : ATM ಗೆ ನುಗ್ಗಿದ ಬೆಡ್ ಶೀಟ್ ಗ್ಯಾಂಗ್- ನಿಮಿಷದಲ್ಲಿ 30 ಲಕ್ಷ ಎಗರಿಸಿ ಪರಾರಿ !!

Bengaluru : ATM ಗೆ ನುಗ್ಗಿದ ಬೆಡ್ ಶೀಟ್ ಗ್ಯಾಂಗ್- ನಿಮಿಷದಲ್ಲಿ 30 ಲಕ್ಷ ಎಗರಿಸಿ ಪರಾರಿ !!

0 comments

Bengaluru : ರಾಜ್ಯದಲ್ಲಿ ಕಳ್ಳತನದ ಪ್ರಕರಣಗಳು ವಿಪರೀತ ಹೆಚ್ಚುತ್ತಿದೆ. ಬ್ಯಾಂಕ್ ದರೋಡೆ, ಮನೆ ದರೋಡೆ, ಎಟಿಎಂ ದರೋಡೆ ಹೀಗೆ ದಿನನಿತ್ಯ ಒಂದಲ್ಲ ಒಂದು ಪ್ರಕರಣಗಳು ಕಣ್ಣಿಗೆ ರಾಚುತ್ತಿದೆ. ಇತ್ತೀಚಿಗಷ್ಟೇ ಮಂಗಳೂರಿನ ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ಈ ಬಡಿಕ ಹಾಸನ ಹಾಗೂ ಬೆಳಗಾವಿಯಲ್ಲಿಯೂ ಎಟಿಎಂ ದರೋಡೆ ಪ್ರಕರಣಗಳು ಜನರನ್ನು ಬೆಚ್ಚಿ ಬೀಳಿಸಿತ್ತು. ಈ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ದರೋಡೆಯಾಗಿದ್ದು ಬರೋಬ್ಬರಿ 30000 ದರೋಡೆಕೋರರು ಎದುರಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಸೂಲಿಬೆಲೆಯಲ್ಲಿ ಎಟಿಎಂ ದರೋಡೆಕೋರರು ತಮ್ಮ ಕೈಚಳಕ ತೋರಿದ್ದು ನಿಮಿಷಗಳಲ್ಲೇ ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾಗಿದ್ದಾರೆ. ನಿನ್ನೆ (ಫೆಬ್ರವರಿ 28) ಮಧ್ಯರಾತ್ರಿ ಕಪ್ಪು ಬಣ್ಣದ ಕ್ರೆಟಾ ಕಾರ್‌ನಲ್ಲಿ ಎಟಿಎಂ ಬಳಿ ಬಂದಿಳಿದ ದರೋಡೆಕೋರರು ಕಣ್ಣು ಹೊರತುಪಡಿಸಿ ಇಡೀ ದೇಹಕ್ಕೆ ಬೆಡ್‌ಶೀಟ್ ಸುತ್ತಿಕೊಂಡು ದರೋಡೆ ಮಾಡಿದ್ದಾರೆ.

ಎಟಿಎಂಗೆ ಸೆಕ್ಯೂರಿಟಿ ಇಲ್ಲದ್ದನ್ನು ಅರಿತು ಯೋಜನೆ ರೂಪಿಸಿದ್ದ ಈ ಕಳ್ಳರ ಗ್ಯಾಂಗ್ ಗುರುತು ಸಿಗದ ಹಾಗೆ ಬೆಡ್‌ಶೀಟ್ ಸುತ್ತಿಕೊಂಡು ಎಟಿಎಂ ಪ್ರವೇಶಿಸಿದ ಬೆನ್ನಲ್ಲೇ ಅಲ್ಲಿನ ಎಲ್ಲ ಸಿಸಿಟಿವಿ ಕ್ಯಾಮೆರಾಗಳಿಗೂ ಸ್ಪ್ರೇ ಹೊಡೆದಿದ್ದಾರೆ. ಬಳಿಕ ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ಮಷಿನ್ ಅನ್ನು ತೆರೆದು ಬರೋಬ್ಬರಿ 30 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ.

You may also like