Belagavi: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹದಿನೇಳು ವರ್ಷದ ಬಾಲಕಿ ಇನ್ನೇನು ಪರೀಕ್ಷೆ ಬರೆಯಬೇಕು ಎನ್ನುವಷ್ಟರಲ್ಲಿಯೇ ಬಾರದ ಲೋಕಕ್ಕೆ ಹೋಗಿದ್ದಾಳೆ.
ಸಿದ್ದಲಿಂಗ ಪೂಜೇರಿ ಎನ್ನುವ ಯುವಕನೋರ್ವನ ಕಾಟದಿಂದ ಬೇಸತ್ತ ಬಾಲಕಿ ನಿನ್ನೆ (ಮಾ.16) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ. ಆದರೆ ಇಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಹೊಂದಿದ್ದಾಳೆ.
21ರ ಹರೆಯದ ಸಿದ್ದಲಿಂಗ ಪೂಜೇರಿ ಎನ್ನುವಾತ ಪ್ರೀತ್ಸೇ ಪ್ರೀತ್ಸೆ ಎಂದು ಹೇಳುತ್ತಾ, ಬಾಲಕಿ ಹೋದಲ್ಲಿ ಬಂದಲ್ಲೆಲ್ಲ ಹೋಗಿ ಟಾರ್ಚರ್ ಕೊಡುತ್ತಿದ್ದ. ಹಲವಾರು ಬಾರಿ ಯುವಕನಿಗೆ ಎಚ್ಚರಿಕೆ ನೀಡಿದರೂ ಈತ ತನ್ನ ಚಾಳಿ ಬಿಟ್ಟಿರಲಿಲ್ಲ. ಇದರಿಂದ ಮನನೊಂದ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪೋಷಕರು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು ಮಾಡಿದ್ದಾರೆ. ಸಿದ್ದಲಿಂಗನನ್ನು ಬಂಧಿಸಿ ವಿಚಾರಣೆ ನಡೆಸಿ ಜೈಲಿಗಟ್ಟಿದ್ದಾರೆ.
