Home » Belagavi: ‘ನಾ ಡ್ರೈವರʼ ಹಾಡಿನ ಹಾಡುಗಾರ ಮಾಳು ನಿಪನಾಳನಿಂದ ಯುವಕ, ಮಹಿಳೆ ಮೇಲೆ ಹಲ್ಲೆ!

Belagavi: ‘ನಾ ಡ್ರೈವರʼ ಹಾಡಿನ ಹಾಡುಗಾರ ಮಾಳು ನಿಪನಾಳನಿಂದ ಯುವಕ, ಮಹಿಳೆ ಮೇಲೆ ಹಲ್ಲೆ!

0 comments

Belagavi: ಕಾರನ್ನು ನಿಧಾನವಾಗಿ ಚಲಿಸಿ ಎಂದು ಹೇಳಿದ್ದಕ್ಕೆ ಯುವಕ ಹಾಗೂ ಆತನ ಸಹೋದರಿ ಮೇಲೆ ʼನಾ ಡ್ರೈವರʼ ಹಾಡಿನ ಖ್ಯಾತಿಯ ಗಾಯಕ ಮಾಳು ನಿಪನಾಳ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದೆ.

ಗಾಯಗೊಂಡ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಿಧಾನವಾಗಿ ಕಾರು ಓಡಿಸಿ ಎಂದು ಹೇಳಿದ್ದಕ್ಕೆ ಆರೋಪಿಗಳು ಹಲ್ಲೆಗೆ ಮುಂದಾಗಿದ್ದು, ಈ ಸಂದರ್ಭದಲ್ಲಿ ಮಹಿಳೆ ಎಂದು ಕೂಡಾ ನೋಡದೇ ಹಲ್ಲೆ ಮಾಡಿದ್ದಾರೆ. ಈ ಪ್ರಕರಣಕ್ಕೂ ಮೊದಲು ಗಾಯಕ ಮಾಳು ನಿಪನಾಳ ಮೇಲೆ ಮೂರು ಪ್ರಕರಣ ದಾಖಲಾಗಿದೆ.

ಶೇಖಪ್ಪ ಹಕ್ಯಾಗೋಳ ಮತ್ತು ಸಹೋದರಿಗೆ ಗಾಯವಾಗಿದದ್ದು ಇವರಿಬ್ಬರೂ ಚಿಕ್ಕೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಯಬಾಗ ತಾಲೂಕಿನ ನಿಪನಾಳ ಹೊರವಲಯದಲ್ಲಿ ಯುವಕ ಮತ್ತು ಆತನ ಸಹೋದರಿ ಬೈಕ್‌ ಮೇಲೆ ಸಂಚಾರ ಮಾಡುತ್ತಿದ್ದಾಗ ಗಾಯಕ ಮಾಳು ನಿಪನಾಳ ಹಾಗೂ ಆತನ ಕಾರಿನಲ್ಲಿ ತೆರಳು ವೇಳೆ ಎದುರಿಗಿದ್ದ ಯುವಕನ ಬೈಕ್‌ ಮೇಲೆ ಜೋರಾಗಿ ಕಾರು ಬಂದಿದ್ದು, ಆಗ ಬೈಕ್‌ನಲ್ಲಿದ್ದ ಮಹಿಳೆ ʼನೋಡಿಕೊಂಡು ಕಾರು ಓಡಿಸಿʼ ಎಂದು ಹೇಳಿದ್ದಾಳೆ.

ಇದರಿಂದ ಕೋಪಗೊಂಡ ಮಾಳು ನಿಪನಾಳ ಮತ್ತು ಆತನ ಸ್ನೇಹಿತರು ಇಬ್ಬರಿಗೂ ಹಲ್ಲೆ ಮಾಡಿದ್ದಾರೆ.

ಜಾನಪದ ಕಲಾವಿದ ಮಾಳು ನಿಪನಾಳ ಕೆಲವರ ಮೇಲೆ ಹಲ್ಲೆ ಮಾಡಿರುವುದ ಕುರಿತು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ಮಾಡಿದಾಗ ಈತ ಹಲ್ಲೆ ಮಾಡಿರುವುದು ಮೇಲ್ನೋಟಕ್ಕೆ ನಿಜವಾಗಿದೆ. ನೊಂದವರಿಗೆ ನಮ್ಮ ಪೊಲೀಸರು ಕರೆ ಮಾಡಿ ಪ್ರಕರಣ ದಾಖಲು ಮಾಡುವಂತೆ ಹೇಳಿದ್ದಾರೆ. ಅವರು ನಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ, ಆಮೇಲೆ ಪ್ರಕರಣ ದಾಖಲು ಮಾಡುವುದಾಗಿ ಹೇಳಿದ್ದಾರೆ. ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಕಾನೂನು ಕೈಗೆ ತೆಗೆದುಕೊಂಡರೆ ಸೂಕ್ರ ಕ್ರಮವನ್ನು ಅವರ ವಿರುದ್ಧ ತೆಗೆದುಕೊಳ್ಳಲಾಗುವುದು ಎಂದು ಬೆಳಗಾವಿ ಎಸ್‌ ಪಿ ಭೀಮಾಶಂಕರ ಗುಳೇದ ಹೇಳಿದ್ದಾರೆ.

You may also like

Leave a Comment